ಮಣಿಪಾಲ :ಆರ್ಥಿಕ ಸಮಸ್ಯೆಯಿಂದ ಆತ್ಯಹತ್ಯೆಗೆ ಶರಣಾದ ಟ್ಯಾಕ್ಸಿ ಚಾಲಕ

(ನ್ಯೂಸ್ ಕಡಬ) newskadaba.com ಮಣಿಪಾಲ, ಸೆ.16:  ಆರ್ಥಿಕ ಸಮಸ್ಯೆಯಿಂದ ಹೌಸಿಂಗ್ ಲೋನ್ ಕಟ್ಟಲಾಗದೆ ನೊಂದು ಟ್ಯಾಕ್ಸಿ ಚಾಲಕರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದ ಸುವಿಧಾ ಅಪಾಟ್ಮೆಂಟ್ ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

 

ಮೃತ ವ್ಯಕ್ತಿಯನ್ನು ಕುಂದಾಪುರ ಮೂಲದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಮೃತ ರಾಘವೇಂದ್ರ ಅವರು ಬ್ಯಾಂಕೊಂದರಲ್ಲಿ ಹೌಸಿಂಗ್ ಲೋನ್ ಮಾಡಿದ್ದು ಆರ್ಥಿಕ ಸಮಸ್ಯೆಯಿಂದ ಅದನ್ನು ಕಟ್ಟಲಾಗಿದೆ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರಾಘವೇಂದ್ರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನಡೆದುಕೊಂಡು ಹೋಗುತ್ತಿದ್ದ ಯೂಟ್ಯೂಬ್ ವ್ಲಾಗರ್'ಗೆ ಲೈಂಗಿಕ‌ ಕಿರುಕುಳ..!

 

 

error: Content is protected !!
Scroll to Top