ಮಂಗಳೂರು: ಕೊರೋನಾ ಸೋಂಕಿತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ

(ನ್ಯೂಸ್ ಕಡಬ) ಮಂಗಳೂರು, ಸೆ. 16. 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಕೊರೊನಾ ಸೋಂಕಿನಿಂದಾಗಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದು ಪರೀಕ್ಷೆ ಬರೆಯಲು ಆಗ್ರಹಿಸುವ ವಿದ್ಯಾರ್ಥಿಗಳು ತಾವು ಚಿಕಿತ್ಸೆ ಪಡೆಯುತ್ತಿರುವ ವೈಧ್ಯಾಧಿಕಾರಿಗಳ ಅನುಮತಿಯಂತೆ ಪತ್ರವನ್ನು ಪಡೆದು ಮನವಿ ಸಲ್ಲಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಗೊತ್ತು ಮಾಡಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ಅಂತಹ ವಿದ್ಯಾರ್ಥಿಗಳಿದ್ದಲ್ಲಿ ತಾಲೂಕುವಾರು ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸೆಪ್ಟೆಂಬರ್ 19ರೊಳಗೆ ನೊಂದಾಯಿಸಬಹುದು.

ಸಂಪರ್ಕಿಸಬಹುದಾದ ನೋಡಲ್ ಅಧಿಕಾರಿಗಳ ವಿವರ: ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿ – ಸುಶೀಲ, ದೂರವಾಣಿ ಸಂಖ್ಯೆ: 9741131138, ಬೆಳ್ತಂಗಡಿ ತಾಲೂಕು ನೋಡಲ್ ಅಧಿಕಾರಿ- ದಿನೇಶ, ದೂರವಾಣಿ ಸಂಖ್ಯೆ: 9632543262, ಮಂಗಳೂರು ಉತ್ತರ ತಾಲೂಕು ನೋಡಲ್ ಅಧಿಕಾರಿ – ಲಲಿತ ಕೆ, ದೂರವಾಣಿ ಸಂಖ್ಯೆ:9741131138, ಮಂಗಳೂರು ದಕ್ಷಿಣ ತಾಲೂಕು ನೋಡಲ್ ಅಧಿಕಾರಿ- ಜ್ಯೋತಿ, ದೂರವಾಣಿ ಸಂಖ್ಯೆ: 9448823822, ಮೂಡಬಿದಿರೆ ತಾಲೂಕು – ನೋಡಲ್ ಅಧಿಕಾರಿ ಶಿವಾನಂದ ದೂರವಾಣಿ ಸಂಖ್ಯೆ: 9741131138, ಪುತ್ತೂರು ತಾಲೂಕು ನೋಡಲ್ ಅಧಿಕಾರಿ- ಹರಿಪ್ರಸಾದ್ ದೂರವಾಣಿ ಸಂಖ್ಯೆ:9901402398, ಸುಳ್ಯ ತಾಲೂಕು – ನೋಡಲ್ ಅಧಿಕಾರಿ ಲಕ್ಷ್ಮೀಶ ದೂರವಾಣಿ ಸಂಖ್ಯೆ:9741131138.

Also Read  ➤ ಕರ್ನಾಟಕದಲ್ಲಿ ಹೊಸ ಪ್ರಭೇದ 2 ಏಡಿ ಪತ್ತೆ!

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತಹ ಸೋಂಕಿತ ವಿದ್ಯಾರ್ಥಿಗಳಿಗೆ ಈ ಅವಕಾಶ ಇರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top