ಜೇಸಿಐ ಕಡಬ ಕದಂಬದ ಜೇಸಿ ಸಪ್ತಾಹ ‘ಕದಂಬೋತ್ಸವ’ ಸಮಾರೋಪ ➤ ಕೊರೋನಾ ವಾರಿಯರ್ ಹರೀಶ್ ಬೆದ್ರಾಜೆಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಸೆ.15. ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ನ ವತಿಯಿಂದ ಕಳೆದೊಂದು ವಾರದಿಂದ ನಡೆಯುತ್ತಿರುವ ಜೇಸಿ ಸಪ್ತಾಹದ ಸಮಾರೋಪ ಸಮಾರಂಭವು ಕಡಬದ ಜೈರಾಮ್ ಟವರ್ಸ್ ನಲ್ಲಿ ಮಂಗಳವಾರ ರಾತ್ರಿ ನಡೆಯಿತು.

ಅತಿಥಿಗಳಾಗಿ ಪುತ್ತೂರು ಎಪಿಎಂಸಿಯ ಮಾಜಿ ಅಧ್ಯಕ್ಷರಾದ ಸೀತಾರಾಮ ಗೌಡ ಪೊಸವಳಿಕೆ, ಜೇಸಿಐ ಭಾರತದ ವಲಯ 15 ರ ಉಪಾಧ್ಯಕ್ಷರಾದ ಲೋಕೇಶ್ ರೈ ಕಡಬ, ರಕ್ತದಾನ ವಿಭಾಗದ ವಲಯ ಸಂಯೋಜಕರಾದ ಅಶೋಕ್ ಕುಮಾರ್ ಪಿ., ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ಪಟ್ಟಣ ಪಂಚಾಯತ್ ನ ಬಿಲ್ ಕಲೆಕ್ಟರ್ ಹರೀಶ್ ಬೆದ್ರಾಜೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ಮೋಹನ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು.

Also Read  ಹಳೆನೇರಂಕಿ: ಅಕ್ರಮ ಮದ್ಯ ಮಾರಾಟದ ವೇಳೆ ಅಬಕಾರಿ ಅಧಿಕಾರಿಗಳ ದಾಳಿ ➤ ದ್ವಿಚಕ್ರ ವಾಹನ ಸಹಿತ ಮದ್ಯ ವಶಕ್ಕೆ, ಆರೋಪಿ ಪರಾರಿ

ವೇದಿಕೆಯಲ್ಲಿ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ್ ಎನ್.ಕೆ., ನಿಕಟಪೂರ್ವಾಧ್ಯಕ್ಷ ರವಿಚಂದ್ರ ಪಡುಬೆಟ್ಟು, ಸಪ್ತಾಹ ನಿರ್ದೇಶಕ ತಿರುಮಲೇಶ್ ಭಟ್, ಘಟಕದ ಕಾರ್ಯದರ್ಶಿ ಝಫೀರ್ ಮಹಮ್ಮದ್ ಉಪಸ್ಥಿತರಿದ್ದರು.

error: Content is protected !!
Scroll to Top