(ನ್ಯೂಸ್ ಕಡಬ) newskadaba.com ಉಡುಪಿ, ಸೆ. 15. ಮುಂಬೈ, ಬೆಂಗಳೂರು, ಮಂಗಳೂರು, ಸೇರಿದಂತೆ ದೇಶಾದ್ಯಂತ ಇದೀಗಾ ಮಾದಕ ದೃವ್ಯ ಹಾಗೂ ಗಾಂಜದ್ದೇ ಸದ್ದು- ಸುದ್ದಿಯಾಗಿದೆ. ಅದರ ಜೊತೆಗೆ ಕರಾವಳಿಯೇ ಅತೀ ಹೆಚ್ಚಾಗಿ ದ್ರವ್ಯಕ್ಕೆ ಕೇಂದ್ರ ಬಿಂದುವೆಂಬಂತೆ ಪರಿಣಮಿಸುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಉಡುಪಿಯಲ್ಲಿ ಖುದ್ದಾಗಿ ಎಸ್ ಪಿ ವಿಷ್ನುವರ್ಧನ್, ಎ ಎಸ್ಪಿ ಕುಮಾರ ಚಂದ್ರ ರವರು ಫೀಲ್ಡಗೆ ಇಳಿದಿದ್ದಾರೆ.
ಕರಾವಳಿ ನಗರಿ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಪೊಲೀಸರು ಹದ್ದಿನ ಕಣಿಟ್ಟಿದ್ದಾರೆ. ಚೆಕ್ ಪೋಸ್ಟ್ ನಗರ ಪ್ರದೇಶ ತಾಲೂಕಯ ಜಿಲ್ಲಾ ಗಡಿಯಲ್ಲಿ ಹೆಚ್ಚು ಹೆಚ್ಚು ತಪಾಸಣೆ ಮಾಡುತ್ತಿದ್ದಾರೆ. ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕೂಡಾ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಇನ್ನು, ಈ ಕಾರ್ಯಚರಣೆಗೆ ಖುದ್ದಾಗಿ ಎಸ್ ಪಿ ವಿಷ್ನುವರ್ಧನ್, ಎ ಎಸ್ಪಿ ಕುಮಾರ ಚಂದ್ರ ರವರು ಫೀಲ್ಡಗೆ ಇಳಿದಿದ್ದಾರೆ. ಕರ್ಕಶವಾಗಿ ಓಡಾಡುವ ಬುಲೆಟ್ ಭೈಕುಗಳಿಗೂ ಫೈನ್ ಹಾಕಿದ್ದಾರೆ. ಕಣ್ಣುಕೋರೈಸುವ ಲೈಟ್ ಗಳನ್ನ ಅಳವಡಿಸಿಕೊಂಡು ಸುತ್ತುವವರಿಗೂ ದಂಡದ ಬಿಸಿ ಮುಟ್ಟಿಸಿದ್ದಾರೆ. ಕೇವಲ ಎರಡು ಗಂಟೆಯಲ್ಲೇ ಸುಮಾರು 70 ಕೇಸುಗಳನ್ನು ದಾಕಲಿಸಿ 40 ಸಾವಿರಕ್ಕೂ ಅಧಿಕ ಫೈನ್ ವಸುಲಿ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಡ್ರಗ್ ಪೆಡ್ಲರ್ ಪರೇಡ್ ಮಾಡುತ್ತವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾದಕ ದ್ವವ್ಯ ಮಾರಾಟ , ಟ್ರಾಫಿಕ್ ರೂಲ್ಸ್ ಬ್ರೇಕ್ ವಿರುದ್ಧ ಜಾಗೃತಿ ಮೂಡಿಸಿ ದಂಡ ಹಾಕುವುದಾಗಿ ಎಸ್ ಪಿ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ಧಾರೆ.