ಅನೈತಿಕ ಸಂಬಂಧ ಆರೋಪ ➤ ಪತಿ ವಿರುದ್ಧ ಪತ್ನಿಯಿಂದಲೇ ದೂರು..!!

(ನ್ಯೂಸ್ ಕಡಬ) newskadaba.com ಮುಲ್ಕಿ, ಸೆ. 15. ಸರಕಾರಿ ಹಾಸ್ಟೇಲ್ ನಲ್ಲಿ ಅಡುಗೆ ಕೆಲಸದಲ್ಲಿರುವವನ ಅಕ್ರಮ ಸಂಬಂಧದ ಬಗ್ಗೆ ಮತ್ತು ಸರಕಾರಿ ಸ್ವತ್ತುಗಳನೇ ಮಾರಾಟಕ್ಕೆ ಸಂಬಂಧಿಸಿದಂತೆ ಪಡು ಪಣಂಬೂರು ಗ್ರಾಮದ ನಿವಾಸಿ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಈತ ಸರ್ಕಾರಿ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡುತ್ತಿದ್ದ. ಕೆಲವನ್ನು ಮಾರಾಟ ಮಾಡಿದ್ದು ಮನೆಗೂ ತಂದಿದ್ದಾನೆ. ಇದರ ಜೊತೆಗೆ ತನಗೆ ಕಿರುಕುಳ ನೀಡುತ್ತಿದ್ದಾನೆ, ತನ್ನ ಗಂಡ ಇನ್ನೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು,ಕೆಲಸ ಮಾಡುವ ಹಾಸ್ಟೆಲ್ ಗೆ ಆ ಮಹಿಳೆ ತಹಶೀಲ್ದಾರ್ ಸೋಗಿನಲ್ಲಿ ತೆರಳಿ. ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಮುಲ್ಕಿಯ ಪಡು ಪಣಂಬೂರು ನಿವಾಸಿ ತೇಜಾಕ್ಷಿ ಎಂಬುವವರು ಪತಿ ಕೊರಗಪ್ಪ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ.  ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಅನೈತಿಕ ಸಂಬಂಧ ಸರ್ಕಾರಿ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

Also Read  ಮಗುವಿನ ಪೋಷಕರ ಪತ್ತೆಗಾಗಿ ಮನವಿ

 

error: Content is protected !!
Scroll to Top