ಪುತ್ತೂರು: ಹಾಡಹಗಲೇ ಅಂಗಡಿಯಿಂದ ಒಂದು ಲಕ್ಷ ರೂ. ನಗದು ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 15. ಹಾಡಹಗಲೇ ಅಂಗಡಿಯಿಂದ ಒಂದು ಲಕ್ಷ ರೂ. ನಗದು ಕಳವುಗೈದ ಘಟನೆ ತಿಂಗಳಾಡಿಯಲ್ಲಿ ನಡೆದಿದೆ.

ತಿಂಗಳಾಡಿಯ ಅಬ್ದುಲ್ಲ ಎಂಬವರ ಮಗ ಸಿಯಾಬುದ್ದೀನ್ ಅವರು ತಿಂಗಳಾಡಿಯಲ್ಲಿ ರಬ್ಬರ್, ತೆಂಗಿನಕಾಯಿ, ಬಾಳೆಗೊನೆ ವ್ಯಾಪಾರ ನಡೆಸುತ್ತಿದ್ದು ಸೋಮವಾರ ಬೆಳಗ್ಗೆ 1.40 ಲಕ್ಷ ರೂ. ನಗದಿನೊಂದಿಗೆ ಬಂದಿದ್ದು, ಇದರ ಪೈಕಿ 40 ಸಾವಿರವನ್ನು ಅಂಗಡಿಯ ಮೇಜಿನ ಡ್ರಾವರ್ ನಲ್ಲಿಟ್ಟು, ಉಳಿದ ಒಂದು ಲಕ್ಷ ರೂ. ವನ್ನು ಕಪ್ಪು ಬಣ್ಣದ ಬ್ಯಾಗ್ ನಲ್ಲಿ ಪ್ರತ್ಯೇಕವಾಗಿ ಅದೇ ಡ್ರಾವರ್ ನಲ್ಲಿಟ್ಟಿದ್ದರು.

ಮಧ್ಯಾಹ್ನ ಸುಮಾರು 1.10 ಕ್ಕೆ ಸಚಿನ್ ಎಂಬವರಿಂದ ರಬ್ಬರ್ ಸ್ಕ್ರಾಪ್ ಖರೀದಿಸಿ, ಅದನ್ನು ತನ್ನ ಗೋದಾಮಿನಲ್ಲಿ ಇರಿಸಿ ಬಂದು ಈತನಿಗೆ ಹಣ ಕೊಡಲೆಂದು ಡ್ರಾವರ್ ನಲ್ಲಿ ಇಟ್ಟಿದ್ದ ಹಣ ತೆಗೆಯಲು ಮುಂದಾದಾಗ ಒಂದು ಲಕ್ಷ ಕ್ಯಾಶ್ ಅನ್ನು ಯಾರೋ ಕಳ್ಳತನ ಮಾಡಿದ್ದು ಕಂಡು ಬಂದಿದೆ. ಈ ಕುರಿತು ಸಿಯಾಬುದ್ದೀನ್ ಎಂಬವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ವಕ್ಫ್ ಬೋರ್ಡ್ ವಿರುದ್ದ ಪ್ರಧಾನಿಗೆ ಪತ್ರ ಬರೆದ ಯತ್ನಾಳ್..!

error: Content is protected !!
Scroll to Top