ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ಬಳಗದ ವತಿಯಿಂದ ಪ್ಲಾಸ್ಮಾ ರಕ್ತ ಸಂಗ್ರಹ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 14. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಪ್ಲಾಸ್ಮಾ ದಾನಿಗಳ ಮಾದರಿ ರಕ್ತ ಸಂಗ್ರಹ ಇಂದು ಕೈಕಂಬದಲ್ಲಿ ನಡೆಯಿತು.

ವಿಖಾಯ ತಂಡದ ರಕ್ತದಾನ ಶಿಬಿರದಲ್ಲಿ ಈ ಕಾರ್ಯವನ್ನು ಮಾಡಲಾಯಿತು. ಹದಿನಾಲ್ಕು ಜನರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದಾಗ ಹನ್ನೆರಡು ಜನರ ರಕ್ತವನ್ನು ಪ್ಲಾಸ್ಮಾ ದಾನಕ್ಕಾಗಿ ಪಡೆಯಬಹುದು ಎಂದು ತಿಳಿಸಲಾಯಿತು. SKSSF ವಿಖಾಯ ರಕ್ತದಾನಿ ಬಳಗದ ವತಿಯಿಂದ ಜಿಲ್ಲೆಯಲ್ಲಿ ರಕ್ತದಾನ ಅಭಿಯಾನ ನಡೆಯುತ್ತಿದ್ದು ಸುಮಾರು 2500 ಯುನಿಟ್ ರಕ್ತ ಸಂಗ್ರಹದ ಗುರಿ ಹೊಂದಲಾಗಿದೆ.

ಇದೇ ತಿಂಗಳು 26 ರಂದು ಸುಳ್ಯ ಅರಂತೋಡಿನಲ್ಲಿ ನಡೆಯಲಿರುವ ರಕ್ತದಾನ ಶಿಬಿರದಲ್ಲಿ ಸುಳ್ಯ ಹಾಗೂ ಮಡಿಕೇರಿ ಮೂಲದ ಸುಮಾರು 50 ಜನ ಪ್ಲಾಸ್ಮಾ ದಾನಿಗಳ ಮಾದರಿ ರಕ್ತ ಸಂಗ್ರಹ ನಡೆಯಲಿದೆ ಎಂದು ಜಿಲ್ಲಾ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದು, ದಾನಿಗಳು ಸಹಕರಿಸುವಂತೆ ಕೋರಿದ್ದಾರೆ. 9686947071

Also Read  ಕೆ.ವಿ.ಜಿ. ಸ್ಥಾಪಕರ ದಿನಾಚರಣೆ ಸಮಿತಿ ವತಿಯಿಂದ ಕುರುಂಜಿ ಪುತ್ಥಳಿಗೆ ಹಾರಾರ್ಪಣೆ

error: Content is protected !!
Scroll to Top