ಮಂಗಳೂರು ವಿ.ವಿ ಪದವಿ ಪರೀಕ್ಷೆ ಹಿನ್ನೆಲೆ ➤ ಧರ್ಮಸ್ಥಳ- ಕಲ್ಲುಗುಡ್ಡೆ- ಸುಬ್ರಹ್ಮಣ್ಯ ಬಸ್ ಮರು ಪ್ರಾರಂಭಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಮುಂದಿನ ದಿನಗಳಲ್ಲಿ ನಡೆಯಲಿರುವ ಮಂಗಳೂರು ವಿ.ವಿ. ಪದವಿ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗುವಂತೆ ಧರ್ಮಸ್ಥಳ- ಇಚ್ಲಂಪಾಡಿ- ಕಲ್ಲುಗುಡ್ಡೆ- ಸುಬ್ರಹ್ಮಣ್ಯ ಇದರ ಮಧ್ಯೆ ಕೆಎಸ್ಸಾರ್ಟಿಸಿ ಬಸ್‍ ಅನ್ನು ಮರು ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.


ನೂಜಿಬಾಳ್ತಿಲಕ್ಕೆ ಬಂದಿದ್ದ ಸಚಿವರಿಗೆ, ನೂಜಿಬಾಳ್ತಿಲ ನೂಜಿಬೈಲ್ ತೆಗ್‍ರ್‍ ತುಳುಕೂಟೋ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಮ್ ಅವರು ಮನವಿ ಸಲ್ಲಿಸಿದರು. ಪದವಿ ವಿದ್ಯಾರ್ಥಿಗಳ ಪರೀಕ್ಷೆಯು ಸೆಪ್ಟೆಂಬರ್ 16ರಿಂದ ಪ್ರಾರಂಭವಾಗಲಿದ್ದು, ಧರ್ಮಸ್ಥಳದಿಂದ ಕೊಕ್ಕಡ, ಇಚ್ಲಂಪಾಡಿ, ಕಲ್ಲುಗುಡ್ಡೆ, ಗೋಳಿಯಡ್ಕ, ಮರ್ಧಾಳ ಮತ್ತು ಸುಬ್ರಹ್ಮಣ್ಯಕ್ಕೆ ಬೆಳಿಗ್ಗೆ 7.30 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಿದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜಾರಾಗಲು ಸಹಕಾರಿಯಾಗಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

Also Read  ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಾಗೇಶ್ ಶೆಟ್ಟಿ

error: Content is protected !!
Scroll to Top