(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಪಂಜದ ಪುಟ್ಟ ಬಾಲಕನ ಪ್ರತಿಭೆಯ ವೀಡಿಯೋವೊಂದನ್ನು ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಬೆಂಗಳೂರಿನ ದಿಲ್ಲಿ ಸ್ಕೂಲಿನಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಯಾಗಿರುವ ಆಕಾಶ್, ಇಂಜಿನಿಯರ್ ಆದಿತ್ಯ ಹಾಗೂ ಇಂಜಿನಿಯರ್ ಪೂನಂ ಅವರ ನಾಲ್ಕು ವರ್ಷದ ಪುತ್ರ. ಈತ ಡಾ. ರಾಜ್ ಕುಮಾರ್ ನಟಿಸಿರುವ ಬಬ್ರುವಾಹನ ಚಿತ್ರದ ಸಂಭಾಷಣೆಯನ್ನು ಅಭಿನಯ ಮಾಡಿದ್ದು, ಇದನ್ನು ವಿಡಿಯೋ ಮಾಡಿ ಹೆತ್ತವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೋ ದೃಶ್ಯವನ್ನು ಕಂಡ ಪುನೀತ್ ರಾಜ್ ಕುಮಾರ್ ಅದಕ್ಕೆ ತನ್ನ ಮೆಚ್ಚುಗೆಯ ವಾಕ್ಯಗಳನ್ನು ಸೇರಿಸಿ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದೀಗ ವೀಡಿಯೋ ವ್ಯಾಪಕವಾಗಿ ವೈರಲ್ ಆಗ್ತಾ ಇದೆ.
Also Read ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಂದ ಅನುದಾನ ► ಕೊಯಿಲ - ಗಂಡಿಬಾಗಿಲು ರಸ್ತೆ ದುರಸ್ತಿಗೆ ಶಂಕುಸ್ಥಾಪನೆ