ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.14:  ಬಂಟ್ವಾಳ ಬ್ಲಾಕ್ ಕಾಂಗ್ರೆಸ್, ಬಂಟ್ವಾಳ ಯುವ ಕಾಂಗ್ರೆಸ್, ಮತ್ತು ಇರ್ವತ್ತೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಇವರ ಸಹಕಾರದೊಂದಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಲಾಬಾಗಿಲು ರಝಾನಗರದ ಬುರೂಜ್ ಆಂಗ್ಲ ಮಾದ್ಯಮ ಪ್ರೌಡ ಶಾಲಾ ಸಭಾಂಗಣದಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.

 

ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಮನುಷ್ಯನ ಪ್ರಾಣವನ್ನು ಕಾಪಾಡುವಂತಹ ರಕ್ತದಾನವು ಅತ್ಯಂತ ಶ್ರೇಷ್ಟ ದಾನವಾಗಿದ್ದು ಇಂತಹ ಯುವ ಜನತೆ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

Also Read  ದ.ಕ ಜಿಲ್ಲಾ ಕಮಾಂಡೆಂಟ್ ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

 

error: Content is protected !!
Scroll to Top