ಜೆ.ಇ.ಇ, ನಾಟಾ ಪರೀಕ್ಷೆ ➤ ಉತ್ತಮ ಸಾಧನೆಗೈದ ಇಂದ್ರಪ್ರಸ್ಧ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.14:  ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ.ಇ.ಇ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದು, ಮುಂದಿನ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

 

ಇಂದ್ರಪ್ರಸ್ಥದ ವಿದ್ಯಾರ್ಥಿಗಳಾದ ಸುಹಾಸ್ ಎಂ.ಕೆ. ಅವರು 4512ನೇ ರ‌್ಯಾಂಕ್, ನಿಹಾಲ್ ನೂಜಿಬೈಲ್ ಅವರು 10,174 ರ‌್ಯಾಂಕ್ ಪಡೆದಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳಾದ ಮುಹಮ್ಮದ್ ಶಿಹಾಬ್, ಅನನ್ಯ ಪಿ.ಕೆ., ಜೀವನ್ ಎನ್., ಎ.ಯು. ನಚಿಕೇತ್ ಕುಮಾರ್, ಜೋಶನ್ ವಿ.ಜೆ., ಮುಹಮ್ಮದ್ ತೈಸಿರ್ ಅಲಿ, ಆಯಿಶತ್ ಹೀನಾ, ಚೈತನ್ಯ ಜೆ., ಮೌಲ್ಯ ಆರ್. ಶೆಟ್ಟಿ ಉತ್ತಮ ಸಾಧನೆ ತೋರಿ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಹಾಜರಾಗಿದ್ದಾರೆ. ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ ರವರ ನಾಟಾ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಮನ್ವಿತಾ ಎಸ್. ಅವರು ಮುಂದಿನ ಹಂತದ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್‍ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ವಾಹನ ಡಿಕ್ಕಿ ಹೊಡೆದು ಕಾಡಾನೆ ಮೃತ್ಯು..!

 

error: Content is protected !!
Scroll to Top