ಎಸ್ಡಿಪಿಐ ಆತೂರು ವಲಯ ಸಮಿತಿ ಪುನರ್ರಚನೆ ಹಾಗೂ ಚುನಾವಣಾ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ಇದರ ವಲಯ ಸಮಿತಿಯನ್ನು ಪುನರ್ ರಚಿಸಲಾಯಿತು.

 

ಸಮಿತಿ ಅಧ್ಯಕ್ಷರಾಗಿ ಇಸ್ಮಾಯಿಲ್ ಆತೂರು, ಕಾರ್ಯದರ್ಶಿಯಾಗಿ ಹಫೀಜ್ ಬಂಗ್ಲೆ ಯವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಖಾದರ್ ಬಿ. ಎಸ್, ಹಸನ್ ಸಜ್ಜದ್, ಶರೀಫ್ ಬಿ.ಎಸ್, ಆರಿಫ್ ಕೊಯಿಲ, ಮನ್ಸೂರ್ ಆತೂರ್ ಬೈಲ್ ರವರನ್ನು ಆಯ್ಕೆ ಮಾಡಲಾಯಿತು. ಮುಂಬರುವ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ತಯಾರಿಯ ಬಗ್ಗೆ ಚರ್ಚಿಸಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಎಲ್ಲಾ ಬ್ರಾಂಚ್ ಮತ್ತು ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಪಕ್ಷವು ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಕೊಯಿಲ ಮತ್ತು ರಾಮಕುಂಜ ಪಂಚಾಯತ್‌ನ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ದಿಸುವುದು ಎಂದು ತೀರ್ಮಾನಿಸಲಾಯಿತು. ಕಳೆದ ಸಭೆಯ ನಂತರದ ಎಲ್ಲಾ ಬ್ರಾಂಚ್ ಮಟ್ಟದ ಕಾರ್ಯರೂಪದ ಬಗ್ಗೆ ವರದಿ ಪಡೆದು, ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯತಂತ್ರದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

Also Read  ನವೆಂಬರ್ ನಿಂದ ನಮ್ಮ ಮೆಟ್ರೋ ಪ್ರಯಾಣ ದರ ಶೇ 20ಕ್ಕೆ ಹೆಚ್ಚಳ..!?

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಡಬ ತಾಲೂಕು ಚುನಾವಣಾ ಉಸ್ತುವಾರಿ ಹಮೀದ್ ಮೆಜೆಸ್ಟಿಕ್, ಕಡಬ ತಾಲೂಕು ಸಮಿತಿ ಕಾರ್ಯದರ್ಶಿ ರಫೀಕ್ ಬೈಲು, ಜೊತೆ ಕಾರ್ಯದರ್ಶಿ ಬಶೀರ್ ಹಲ್ಯಾರ ಹಾಗೂ ಎಲ್ಲಾ ಬ್ರಾಂಚ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

error: Content is protected !!
Scroll to Top