(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.14: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್ ಐ ಆಗಿ ಸೇವೆ ಸಲ್ಲಿಸಿದ್ದ ಯೋಗೀಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶಿಸಿದ್ದಾರೆ. ತುಮಕೂರಿನ ಅಡಿಕೆ ವ್ಯಾಪಾರಿಯೋರ್ವರ ಹಣ ದರೋಡೆ ಪ್ರಕರಣದಲ್ಲಿ ಶಾಮೀಲು ಆಗಿದ್ದಾರೆಂಬ ಆರೋಪದಲ್ಲಿ ಈ ಅಮಾನತು ಆದೇಶ ಹೊರಡಿಸಲಾಗಿದೆ.
ತುಮಕೂರಿನ ಅಡಿಕೆ ವ್ಯಾಪಾರಿ ಮೋಹನ್ ಎಂಬುವವರು, ಅಡಿಕೆ ವ್ಯಾಪಾರ ಮಾಡಿದ್ದ ಬಾಕಿ ಹಣವನ್ನು ತರಲು ತನ್ನ ಕೆಲಸಗಾರರನ್ನು ಕಳುಹಿಸಿದ್ದರು. ಅವರು ಹಣ ಪಡೆದು ಕಾರಿನಲ್ಲಿ ಬರುತ್ತಿರುವಾಗ ಎಸ್ ಜೆ ಪಾರ್ಕ್, ಎಸ್ ಐ ಜೀವನ್ ಕುಮಾರ್ ಮತ್ತು ಪೊಲೀಸ್ ರು ಕಾರನ್ನು ಅಡ್ಡ ಗಟ್ಟಿ ಸುಮಾರು 26 ಲಕ್ಷ ಹಣ ದೋಚಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು. ದರೋಡೆ ನಡೆಸಿದವರ ಜೊತೆ ಶಾಮೀಲಾದ ಎಸ್ ಐ ವಿರುದ್ದ, ಯೋಗೀಶ್ ಕುಮಾರ್ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನುವ ಆರೋಪದಡಿಯಲ್ಲಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.