ಉಂಡ ಮನೆಗೇ ಕನ್ನ ಹಾಕಿದ ಭೂಪ ➤ ಮಾಲೀಕನಿಲ್ಲದ ವೇಳೆ ಹಣ ಎಗರಿಸಿ ಸಿಕ್ಕಿ ಬಿದ್ದ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ನಗದು ದೋಚಿದ ಘಟನೆ ತಾಲೂಕಿನ ಮುಖ್ಯ ರಸ್ತೆಯಲ್ಲಿರುವ ಸಂಗೀತಾ ಇಲೆಕ್ಟ್ರಾನಿಕ್ಸ್ ನಲ್ಲಿ ನಡೆದಿದೆ.

ಆರೋಪಿಯನ್ನು ಚಂದ್ರ ಎಂದು ಗುರುತಿಸಲಾಗಿದೆ. ಈತ ಮಾಲೀಕನಿಲ್ಲದ ವೇಳೆ ಹಣವನ್ನು ದೋಚಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ದಿನದ ಪ್ರತೀ ಸಂಗ್ರಹಣೆಯಲ್ಲಿ ಏರುಪೇರು ಬರುತ್ತಿದ್ದ ಕಾರಣ ಅನುಮಾನಗೊಂಡ ಅಂಗಡಿ ಮಾಲಿಕ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದರ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಳ್ಯ: ಭಾರೀ ಮಳೆ- ಭೂಕುಸಿತ ➤ ಆತಂಕದಲ್ಲಿ ಜನತೆ

error: Content is protected !!
Scroll to Top