ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದ ಕಾರ್ಕಳದ ಯುವತಿ ತಮಿಳುನಾಡಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ.05:  ಅಸ್ಸಾಂ ಮೂಲದ ಯುವಕನ ಜೊತೆ ನಿಗೂಢವಾಗಿ ನಾಪತ್ತೆಯಾಗಿದ್ದ ಕಾರ್ಕಳ ಮೂಲದ ಯುವತಿ ಇದೀಗಾ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಪತ್ತೆಯಾಗಿದ್ದಾಳೆ.

 

ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಪ್ಪೆಂಬರ್ 9ರಂದು ನಾಪತ್ತೆಯಾಗಿದ್ದಳು.  ಆಕೆಗೆ ಲಾಕ್ ಡೌನ್ ಸಮಯದಲ್ಲಿ ಮನೆಯವರು ಬೇರೆ ಯುವಕನ ಜೊತೆ ವಿವಾಹ ನಿಶ್ಚಯಮಾಡಿದ್ದರು. ಆ ಯುವಕನೊಂದಿಗೆ ವಿವಾಹವಾಗಲು ಆಕೆಗೆ ಇಷ್ಟವಿರಲಿಲ್ಲ. ಈ ಕುರಿತು ಆಕೆ ತನ್ನ ತಂಗಿಗೆ ಕರೆ ಮಾಡಿ ನಿಶ್ಚಿತವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಮನೆಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಳು.ಇದರಿಂದಾಗಿ ತಂಗಿ ಅಘಾತಗೊಂಡು ಮೃತಪಟ್ಟಿದ್ದರು. ಇದೀಗಾ ಇವರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ಪೊಲೀಸರ ತಂಡವು ಕಾರ್ಕಳಕ್ಕೆ ಕರೆ ತರಲಾಗುತ್ತಿದೆ.

Also Read  ಪುನೀತ್ ರಾಜ್‍ಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ➤ ಪುನೀತ್ ಕೆರೆಹಳ್ಳಿಗೆ ಹಿಗ್ಗಾಮುಗ್ಗ ಥಳಿತ

 

error: Content is protected !!
Scroll to Top