ಲಾರಿ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ..! ➤ ಸ್ಕೂಟಿ ಸವಾರ ಸ್ಥಳದಲ್ಲೇ ಮೃತ್ಯು..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.05:  ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಬೀಕರವಾದ ಅಪಘಾತದಲ್ಲಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಇಂದು (ಸೆ. 13) ನಡೆದಿದೆ.

 

ಅಳದಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ ನಡೆದಿದ್ದು, ಈ ಸಮಯ ಸ್ಕೂಟಿ ಸವಾರ ಗರ್ಡಾಡಿ ಗ್ರಾಮದ ನಿವಾಸಿ ಗಿರೀಶ್ ಮೂಲ್ಯ ರಸ್ತೆಗೆ ಎಸಯಲ್ಪಟ್ಟ ಪರಿಣಾಮ, ಅವರ ತಲೆಯ ಮೇಲೆಯೇ ಲಾರಿ ಚಲಿಸಿದೆ ಪರಿಣಾಮ ಹೆಲ್ಮೆಟ್ ಪುಡಿ ಪುಡಿಯಾಗಿ, ಗಿರೀಶ್ ಮೂಲ್ಯ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕೋಡಲೇ ಸ್ಥಳೀಯರು ಆಂಬ್ಯುಲೆನ್ಸ್ ನಲ್ಲಿ ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿದರು. ಮೃತ ಗಿರೀಶ್ ಮೂಲ್ಯರವರು ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Also Read  ಮತ್ತೆ ಕರ್ನಾಟಕದಿಂದ – ಮಹಾರಾಷ್ಟ್ರಕ್ಕೆ ಶುರುವಾದ ಬಸ್ ಸಂಚಾರ

 

error: Content is protected !!
Scroll to Top