ಕುಕ್ಕೆ ಸುಬ್ರಹ್ಮಣ್ಯ : ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪುಷ್ಪಲತಾ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ.13:  ದೇಗುಲಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ದ.ಕ ಜಿಲ್ಲಾ ಸಹಾಯಕ ಆಯ್ತುಕರ ಕಛೇರಿಯ ಪುಷ್ಪಲತಾ ಅವರು ಶನಿವಾರ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಚಂದ್ರಶೇಖರ ಪೇರಾಲ್ ಅವರು ಪ್ರಭಾರ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.

 

ಪುಷ್ಪಲತಾರವರು ಮಂಗಳೂರಿನ ತೊಕ್ಕೊಟ್ಟು ಬೀರಿಯವರು. ಇವರು ಈಗಾಗಲೇ ಕದ್ರಿ ಮಂಜುನಾಥ ದೇವಾಲಯ, ನಿಲಾವರ ಮಹಿಷಮರ್ಧಿನಿ ದೇವಸ್ಥಾನ, ಅಮೃತೇಶ್ವರಿ ದೇವಸ್ಥಾನ, ಹಳೆಕೋಟೆ ಮಾರಿಯಮ್ಮ ದೇವಸ್ಥಾನ ಬೋಳಾರ, ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Also Read  ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಯುವಕನ ಸ್ಥಿತಿ ಗಂಭೀರ..!

 

 

error: Content is protected !!
Scroll to Top