ಟೌನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ. ಎಸ್ ಅಬ್ದುಲ್ ಖಾದರ್ ನಿಧನ ➤ ಕಡಬ ಕದಂಬ ಆಟೋ ಚಾಲಕ ಮಾಲಕರಿಂದ ಭಾವಪೂರ್ಣ ಶ್ರದ್ದಾಂಜಲಿ

(ನ್ಯೂಸ್ ಕಡಬ) newskadaba.com  ಕಡಬ, ಸೆ.13: ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷ , ಸಮಸ್ತ ಮದ್ರಸಾ ಮ್ಯಾನೇಜ್ ಮೆಂಟ್ ನ ಜಿಲ್ಲಾ ಉಪಾಧ್ಯಕ್ಷ ಜಿಲ್ಲೆಯ ಪ್ರಮುಖ ಉಮರಾ ನೇತಾರರಾಗಿದ್ದ ಹಾಜಿ. ಎಸ್ ಅಬ್ದುಲ್ ಖಾದರ್ (67) ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ದಿನ (ಸೆ.12) ರಾತ್ರಿ ನಿಧನರಾಗಿದ್ದಾರೆ. ಇದರಿಂದ ಕಡಬ ಕದಂಬ ಆಟೋ ಚಾಲಕ ಮಾಲಕರಿಂದ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

 

 

ಕಡಬದ ಶೇಡಿಗುಂಡಿ ಎಂಬಲ್ಲಿ ವಾಸವಿದ್ದ ಅವರು ಕಳೆದೊಂದು ವಾರದಿಂದ ಜ್ವರದ ಹಿನ್ನಲೆಯಲ್ಲಿ ಮಂಗಲೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹಲವು ಸಮಯಗಳಿಂದ ಹೃದಯ ಸಂಬಂಧಿಕಾಯಿಲೆಯಿಂದ ಬಳಲುತ್ತಿದ್ದರು. ಇನ್ನು ಇವರು ಚಿಕಿತ್ಸೆ ಸ್ಪಂದಿಸದೆ ನಿಧರಾಗಿದ್ದಾರೆ. ಕಡಬ ಮಂಡಲ ಪಂಚಾಯತ್ ಸದಸ್ಯರಾಗಿದ್ದ್ದ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ, ಸಾಮಾಜಿಕ, ರಾಜಕೀಯ. ಧಾರ್ಮಿಕ. ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ, ಗಣನೀಯ ಸೇವೆ ಸಲ್ಲಿಸಿದ್ದರು. ಸಮಾಜದಲ್ಲಿ ಅಜಾತ ಶತ್ರುವಾಗಿ ಕಾರ್ಯ ನಿರ್ವಹಿಸಿದ್ದು, 2000 ರಿಂದ 2020 ರ ವರೆಗೂ, ಕಡಬ ಕದಂಬ ಆಟೋ ಚಾಲಕ ಮಾಲಕರ ಸಂಘದ ಗೌರವಾದ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಡಬ ಕದಂಬ ಆಟೋ ಚಾಲಕ ಮಾಲಕರಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹಾಜಿ. ಎಸ್ ಅಬ್ದುಲ್ ಖಾದರ್ ಕಾರ್ಯಗಳನ್ನು ಸ್ಮರಿಸಿದರು.

Also Read  ಉಭಯ ತಾಲೂಕಿನಲ್ಲಿ ಇಂದು 62 ಮಂದಿಯಲ್ಲಿ ಕೊರೋನಾ ದೃಢ

 

error: Content is protected !!
Scroll to Top