“ಚಾರಿಟೇಬಲ್ ಟ್ರಸ್ಟ್ ” ಆಗಿ ನೋಂದಣಿಗೊಂಡ ಕಾರುಣ್ಯ ನಿಧಿ ಕರ್ನಾಟಕ ವಾಟ್ಸಪ್ ಗ್ರೂಪ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಸಾಮಾಜಿಕ ಕಳಕಳಿಯುಲ್ಲ ಯುವಕರ ತಂಡವು ಜಾತಿ, ಮತ, ಬೇದ ಮರೆತು ಬಡವರ, ಅನಾಥರ, ನಿರ್ಗತಿಕರ ಸಂಕಷ್ಟಗೊಳಗಾದವರ ಪರವಾಗಿ ರಾತ್ರಿ ಹಗಲೆನ್ನದೆ ನಿರಂತರವಾಗಿ ಕಾರ್ಯಚರಿಸುತ್ತಿರುವ ‘ಕಾರುಣ್ಯ ನಿಧಿ ಕರ್ನಾಟಕ’ ಎಂಬ ವಾಟ್ಸಪ್ ಗ್ರೂಪನ್ನು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ ಹಾಗೂ ಮಾಧ್ಯಮ ವಲಯದಲ್ಲಿ ಕಾರ್ಯಾಚರಿಸುವ ಸಲುವಾಗಿ ಚಾರಿಟೇಬಲ್ ಟ್ರಸ್ಟಾಗಿ ನೋಂದಣಿ ಮಾಡಲಾಯಿತು.

ಈ ಸಂಸ್ಥೆಯನ್ನು ಪ್ರಗತಿಪರ ಚಿಂತಕ ಮತ್ತು ನ್ಯಾಯವಾದಿಯಾದ ಸುಧೀರ್ ಕುಮಾರ್ ಮುರೋಳಿಯವರ ಸಹಕಾರದಿಂದ ಕಾರುಣ್ಯ ನಿಧಿ ಚಾರಿಟೇಬಲ್ ಟ್ರಸ್ಟ್‌ಗೆ ಸರ್ಕಾರದಿಂದ ಮಾನ್ಯತೆ ಪಡೆಯಲಾಯಿತು.

Also Read  ಕುಡಿದ ಅಮಲಿನಲ್ಲಿ ಪಾದಚಾರಿಗಳಿಗೆ ಚೂರಿ ಇರಿತ..! - ಆರೋಪಿಗಳ ಬಂಧನ

ಕಾರುಣ್ಯ ನಿಧಿ ತಂಡದ ಮುಖ್ಯ ಸಲಹೆಗಾರರಾಗಿ ಹಾಗೂ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿಯವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ) ಸ್ಥಾಪಕರಾದ ಅಬ್ದುಲ್ ಜಲೀಲ್ ಕಳಾರ, ನಿಚ್ಚು ಮಂಗಳೂರು, ಹರ್ಷದ್ ಕೊಪ್ಪ, ಅಬ್ದುಲ್ ಖಾದರ್
ಸದಸ್ಯರಾದ ರಮೀಝ್, ಸುಪೈದ್ ಕೊಪ್ಪ, ತೌಸೀಫ್ ಕೊಪ್ಪ, ಶಾರೂಕು ಕೊಪ್ಪಳ, ದಾವೂದ್ ಉಪಸ್ಥಿತರಿದ್ದರು.

error: Content is protected !!