ಉಪ್ಪಿನಂಗಡಿ: ಮಳೆಗೆ ಕುಸಿದಿದ್ದ ಕಂಪೌಂಡ್ ದುರಸ್ಥಿಗೊಳಿಸಿದ ಎಸ್ಕೆಎಸ್ಸೆಸ್ಸೆಫ್ ಆತೂರು ಕ್ಲಸ್ಟರ್ ವಿಖಾಯ ತಂಡ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 12. ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆದ್ರೋಡಿಯ ಮುಜೀಬ್ ಎಂಬವರ ಮನೆಯ ಕಂಪೌಂಡ್ ಕುಸಿತವಾಗಿದ್ದು, ಇದರ ದುರಸ್ಥಿ ಕಾರ್ಯವನ್ನು SKSSF ಉಪ್ಪಿನಂಗಡಿ ಶಾಖೆ ವಿಖಾಯ ಸದಸ್ಯರು ನೆರವೇರಿಸಿದರು.

ಫಾರೂಕ್ ಝಿಂದಾಗಿ ಹಾಗು SKSSF ಆತೂರು ಕ್ಲಸ್ಟರ್ ವಿಖಾಯ ತಂಡದ ಸದಸ್ಯರಾದ ಆತೂರು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮತ್ತು ವಿಖಾಯ ಸದಸ್ಯರಾದ ಝಕಾರಿಯಾ ಮುಸ್ಲಿಯಾರ್, ಆತೂರು ಕಸ್ಟರ್ ವಿಖಾಯ ಕನ್ವೀನರ್ ಝೈನ್ ಆತೂರು, ನೀರಾಜೆ ಶಾಖೆ ವಿಖಾಯ ಕನ್ವೀನರ್ ಆಝೀಝ್ ಪಾಲತ್ತಾಡಿ, ಆತೂರು ಶಾಖೆ ವಿಖಾಯ ಕನ್ವೀನರ್ ಝಿಯಾ ಆತೂರು ಸದಸ್ಯರಾದ ಅದಂ ಆತೂರು ಮತ್ತು ಅನ್ಸಾರ್ ನೀರಾಜೆ ಇವರೆಲ್ಲರ ಸಹಕಾರದಿಂದ ಮಣ್ಣು ತೆರವುಗೊಳಿಸುವ ಕಾರ್ಯವು ಅಚ್ಚುಕಟ್ಟಾಗಿ ನೆರವೇರಿತು.

Also Read  ಕೈಕಂಬ: ಕೋಟೆಸಾರ್ ಬಳಿಯಿದ್ದ ಕಬ್ಬಿನ ಹಾಲಿನ ಯಂತ್ರ ಎಗರಿಸಿದ ಖದೀಮರು

 

error: Content is protected !!
Scroll to Top