ಸುನ್ನತ್ ಕೆರೆ: ನಾಳೆ (ಸೆ. 13) ರಂದು ಎಸ್ಡಿಪಿಐ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಸುನ್ನತ್ ಕೆರೆ, ಸೆ. 12. ಎಸ್ಡಿಪಿಐ ಸುನ್ನತ್ ಕೆರೆ ಬ್ರಾಂಚ್ ವತಿಯಿಂದ ರಕ್ತದಾನ ಶಿಬಿರ ಮತ್ತು ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ಹಾಗೂ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಯಾಕೂಬ್ ಕೊಯ್ಯುರುರವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ ಸೆ. 13ರ ಆದಿತ್ಯವಾರದಂದು S.D.P.I ಬಸ್ಸು ತಂಗುದಾಣ ಸುನ್ನತ್ ಕೆರೆ ಬಳಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ
ವಿಶೇಷ ಸೂಚನೆಗಳು, 1. ಮಾಸ್ಕ್ ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 2. ನೋಂದಾವಣೆಗೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ತರತಕ್ಕದ್ದು. 3. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಿ.ಪಿ.ಎಲ್ ಪಡಿತರದಾರರಿಗೆ ವಾರ್ಷಿಕ ರೂ. 5 ಲಕ್ಷ ತನಕ ವೈದ್ಯಕೀಯ ವೆಚ್ಚ ಉಚಿತ ಮತ್ತು ಎ.ಪಿ.ಎಲ್ ಪಡಿತರದಾರರಿಗೆ ಕುಟುಂಬಕ್ಕೆ ರೂ 1.50 ಲಕ್ಷ ತನಕ ವೆಚ್ಚ ಉಚಿತವಾಗಿದೆ. 4. ಒಂದು ಮನೆಯಲ್ಲಿ 10 ಸದಸ್ಯರಿಗೂ ಆಯುಷ್ಮಾನ್ ಕಾರ್ಡ್ ಮಾಡಿಸಬಹುದು. ಶುಲ್ಕ ರುಪಾಯಿ 60 ಮಾತ್ರ. ಹೆಚ್ಚಿನ ಮಾಹಿತಿಗಾಗಿ 9740767672, 8970647152 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಆಪರೇಷನ್ ಸನ್ ಸೆಟ್ ವಿಶೇಷ ಅಭಿಯಾನ ಆರಂಭ

error: Content is protected !!
Scroll to Top