ವಿಟ್ಲ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಮರಳು ಕೊರೆಯುವ ಯಂತ್ರ ಬೋಟು ವಶಕ್ಕೆ.

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 12. ಹೊಳೆಯಿಂದ ಮರಳು ಸಂಗ್ರಹಿಸಲು ಸಿದ್ದತೆ ನಡೆಸುತ್ತಿದ್ದ ಸ್ಥಳಕ್ಕೆ ವಿಟ್ಲ ಪ್ರಭಾರ ಎಸೈ ರಜೇಶ್ ಕೆ.ವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಬೋಟು ಹಾಗೂ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕೊಳ್ನಾಡು ಗ್ರಾಸಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.

 

 


ಕೊಳ್ನಾಡು ಗ್ರಮದ ಕುಡ್ತಮುಗೇರು ಭಾಗದಲ್ಲಿ ಹಾದುಹೋಗುವ ಹೊಳೆಯಿಂದ ಕಳೆದ ಕೆಲವು ಸಮಯಗಳಿಂದ ಪಿಕಪ್ ಮೊದಲಾದ ವಾಹನಗಳ ಮೂಲಕ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದರು. ಇದೀಗ ಡ್ರಜ್ಜಿಂಗ್ ಮೆಷಿನ್ ಮೂಲಕ ಹೊಳೆಯಿಂದ ಮರಳು ಸಂಗ್ರಹಿಸಲು ಪ್ಲ್ಯಾಸನ್ ಮಾಡಲಾಗಿತ್ತು. ಅದರಂತೆ ಮರಳು ಸಂಗ್ರಹಿಸಲು ಬೋಟು ಮತ್ತು ಮೆಷಿನ್ ಅನ್ನು ತಂದು ಇಲ್ಲಿ ಇಡಲಾಗಿದೆ.

Also Read  ? ನೇರ ಪ್ರಸಾರ | Live? ಕಡಬಕ್ಕೆ ಆಗಮಿಸಿದ ಕುಕ್ಕೇ ಸುಬ್ರಹ್ಮಣ್ಯದ ಬ್ರಹ್ಮರಥ ➤ ರಥವನ್ನು ಸ್ವಾಗತಿಸಲು ಕಡಬದಲ್ಲಿ ಸೇರಿದ ಜನಸ್ತೋಮ

 

ಇ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಲಕ್ಷಾಂತರ ಮೌಲ್ದಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಯಾರಿಗೆ ಸಂಬಂಧಿಸಿದ ವಸ್ತುಗಳು ಹಾಗೂ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಕ್ರೈನ್ ಮೂಲಕ ಮರಳು ಕೊರೆಯುವ ಯಂತ್ರಗಳನ್ನು ವಿಟ್ಲ ಪೊಲೀಸ್ ಠಾಣೆಗೆ ತಂದಿದ್ದು, ಪ್ರಕರಣವನ್ನು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ದೊಡ್ಡ ಪ್ರಮಾಣದ ವಸ್ತುಗಲನ್ನು ಕಂಡು ಅಲ್ಲಿನ ಜನತೆಯು ಬೆಚ್ಚಿ ಬಿದ್ದಿದ್ದಾರೆ.

 

error: Content is protected !!
Scroll to Top