ಕಡಬ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮರ್ಧಾಳದಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮರ್ದಾಳ, ಸೆ. 12. ಪಾಪ್ಯುಲರ್ ಫ್ರಂಟ್ ಬ್ಲಡ್ ಫೋರಮ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಇಂದು ನಡೆಯಿತು.

ಪ್ರಸ್ತುತ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ  ಸಮಾಜ ಸೇವೆಯ ಬಗ್ಗೆ ಪಾಪ್ಯುಲರ್ ಫ್ರಂಟ್ ಕಬಕ ವಲಯ ಅಧ್ಯಕ್ಷರಾದ ಉಸ್ಮಾನ್ ಎ.ಕೆ ಸವಿಸ್ತಾರವಾಗಿ ವಿವರಿಸಿದರು.

 

ರಕ್ತದಾನದ ಮಹತ್ವ ಮತ್ತು ಉಪಯೋಗದ ಬಗ್ಗೆ ಕಡಬ ಸಮುದಾಯ ಕೇಂದ್ರದ  ಅರೋಗ್ಯಾಧಿಕಾರಿ  ಸುಚಿತ್ರಾ ರಾವ್ ಅವರು  ಸಾಂದರ್ಭಿಕವಾಗಿ  ಮಾತನಾಡಿ ಶುಭ ಹಾರೈಸಿದರು. ರಕ್ತಕ್ಕೆ ಜಾತಿ ಭೇದವಿಲ್ಲ, ರಕ್ತ ಎಲ್ಲರದ್ದೂ ಒಂದೇ, ನಾವೆಲ್ಲರೂ ರಕ್ತದಾನ ಮಾಡುವ ಮೂಲಕ ರೋಗಿಗಳ ಪ್ರಾಣವನ್ನು ಉಳಿಸಬೇಕು ಎಂದು ಸೈಂಟ್ ಮೇರೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಈಶೋ ಫಿಲಿಪ್  ನುಡಿದರು. ಇಂದಿನ ದಿನಗಳಲ್ಲಿ ಯುವಕರು ರಕ್ತದಾನ ಮಾಡುವಂತದ್ದು ಬಹಳಷ್ಟು ಒಳ್ಳೆಯ ಕಾರ್ಯಕ್ರಮ, ಇಂತಹ ಕಾರ್ಯಕ್ರಮ ಇನ್ನೂ ಮುಂದಿನ ದಿನಗಳಲ್ಲಿ ನಡೆಯಬೇಕು ಎಂದು ಸಾಂದರ್ಭಿಕವಾಗಿ ಮಾತನಾಡಿದರು.

Also Read  ’ಟೀನ್ ಸೂಪರ್ ಗ್ಲೋಬ್’- ಪ್ರಶಸ್ತಿ  ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಲೋಕದಲ್ಲಿ ಜಯಗಳಿಸಿದ ಬಾಲಕ

ನಿಮ್ಮ ಸಂಘಟನೆ ನಿರಂತರವಾಗಿ  ಹಲವಾರು ಸಮಾಜಮುಖಿ ಕೆಲಸಗಳು ಮಾಡುವ ಮೂಲಕ ನಮ್ಮ ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಕೈ ಜೋಡಿಸುತ್ತಿದೆ ಎಂದು ಹೇಳುತ್ತಾ ಕಾರ್ಯ ನಿರ್ವಾಹಕರಾದ ಪ್ರವೀಣ್ ಕುಮಾರ್ ಕಾರ್ಯಕ್ರಮಕ್ಕೆ  ಶುಭ ಹಾರೈಕೆ ಮಾಡಿದರು.

 

SSLC ಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಂತಹ ನಿತೇಶ್ ರಂಜಿತಾ ಮತ್ತು ಸುಜಾತರವರಿಗೆ  ಶಾಲು ಹೊದಿಸಿ ಶಾಶ್ವತ ಫಲಕ ನೀಡುವ ಮೂಲಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯದ ವತಿಯಿಂದ ಸನ್ಮಾನ  ಕಾರ್ಯಕ್ರಮ ಮಾಡಲಾಯಿತು.

 

ಪ್ರಸ್ತುತ ಕಾರ್ಯಕ್ರಮದಲ್ಲಿ  ಪಾಪ್ಯುಲರ್ ಮೆಡಿಕಲ್ ಉಸ್ತುವಾರಿ ಸಿದ್ದೀಕ್ ನೆಲ್ಯಾಡಿ ಅಧ್ಯಕ್ಷತೆಯನ್ನು  ವಹಿಸಿದ್ದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ತಾಲೂಕು  ಅಧ್ಯಕ್ಷರಾದ ರಮ್ಲ ಸನ್ ರೈಸ್  ಹಾಗೂ ಹಮೀದ್ ತಂಙಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೌಶಾದ್ ಕಡಬ ಸ್ವಾಗತಿಸಿ, ಅಬ್ದುಲ್ ನಬಿ ಶಾನ್ ಕಳಾರ ವಂದಿಸಿದರು, ಮರ್ಝೂಕ್  ಕೋಲ್ಪೆ ನಿರೂಪಿಸಿದರು.

Also Read  ಕಾರ್ಕಳ: ಕ್ಯಾಶ್ಯೂ ಫ್ಯಾಕ್ಟರಿ ಬಳಿ ಲಾರಿ ಚಾಲಕನ ಕೊಲೆ

error: Content is protected !!
Scroll to Top