ಕಡಬ ಸರಸ್ವತಿ ವಿದ್ಯಾಲಯದಲ್ಲಿ ಉದ್ಯೋಗ ನೈಪುಣ್ಯ ತರಬೇತಿ

(ನ್ಯೂಸ್ ಕಡಬ) newskadaba.com ಕಡಬ , ಸೆ. 12 :ಮಂಗಳೂರು ಗ್ರಾಮವಿಕಾಸ ಸಮಿತಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ, ಹಾಗೂ ದ. ಕ ಜಿಲ್ಲೆ ಸಹಕಾರ ಭಾರತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಡಬದ ವಿದ್ಯಾನಗರದಲ್ಲಿರುವ ಸರಸ್ವತಿ ವಿದ್ಯಾಲಯದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 3 ರವರೆಗೆ ಉಚಿತ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ನಡೆಯಲಿದೆ ಎಂದು  ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಕಡಬ ಹೇಳಿದರು.

 

ಕಡಬದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತಾನಾಡಿ ಗ್ರಾಮೀಣ ಭಾಗದ ಯುವಕರ ಸ್ವಾವಲಂಬಿ ಬದುಕಿಗೆ ಪೂರಕವಾಗುವ ನಿಟ್ಟಿನಲ್ಲಿ ಈ  ಶಿಬಿರವನ್ನು ಆಯೋಜಿಲಾಗಿದೆ. ಕೋರೊನ ಭಾರತಕ್ಕೆ ಆವರಿಸಿದ ಬಳಿಕ ದೇಶದಾಂತ್ಯ ಯುವಜನತೆ ಹಾಗೂ ಬಹುತೇಕರು ಉದ್ಯೋಗ ಕಳೆದುಕೊಂಡು ಪರದಾಡುವ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವ ಉದ್ಯೋಗಕ್ಕೆ ಪೂರಕವಾಗುವ ಆತ್ಮ ನಿರ್ಭರ ಭಾರತ ಪರಿಕಲ್ಪನೆಯನ್ನು ಘೋಷಿಸಿದ್ದಾರೆ ಇದನ್ನು ಸಾಕಾರಗೊಳಿಸುವುದಕ್ಕಾಗಿ ಈಗಾಗಲೇ ಉದ್ಯೋಗ ನೈಪುಣ್ಯ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಪುತ್ತೂರು, ಸುಳ್ಯ, ಬಂಟ್ವಾಳ, ಮಂಗಳೂರು ಮುಂತಾದೆಡೆ ಈಗಾಗಲೇ ಶಿಬಿರಗಳನ್ನು ನಡೆಸಿ 800 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಬಹುತೇಕರು ವ್ಯಾವಹಾರ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ.

Also Read  Breaking news ತುಂಬೆಯ ಯುವಕನಿಗೆ ಕೊರೋನ ಪಾಸಿಟಿವ್

 

ಪ್ಲಂಬಿಂಗ್ ಮತ್ತು ಎಲೆಕ್ಟ್ರೀಷನ್ ವರ್ಕ್, ವಿದ್ಯುತ್ ಉಪಕರಣಗಳ ತರಬೇತಿ, ಹೈನುಗಾರಿಕಾ ತರಬೇತಿ, ಜೇನುಕೃಷಿ, ಪ್ಯಾಬ್ರೀಕೇಶನ್ ತರಬೆತಿ,ಫುಡ್ ಟೆಕ್ನೋಲಜಿ, ಫ್ಯಾಶನ್ ಡಿಸೈನಿಂಗ್, ಅರ್ಥ್ ಮೂವರ್‍ಸ್ ತರಬೇತಿ, ,ಸಿ.ಸಿ ಟಿವಿ ಅಳವಡಿಕೆ ತರಬೇತಿ ಹಾಗೂ ದುರಾಸ್ಥಿ, ಕಸಿ ಕಟ್ಟುವ ತರಬೇತಿ, ಕೃಷಿ ನೀರಾವರಿ, ಗ್ರಾಹಕ ಮಾಹಿತಿ ಸೇವಾ ಕೇಂದ್ರ ನಿರ್ವಹಣ ತರಬೇತಿ ಮುಂತಾದ ವಿಷಯಗಳಲ್ಲಿ ಶಿಬಿರ ನಡೆಯಲಿದ್ದು ಈ ಬಾರಿ ಅರ್ಥ್‌ಮೂವರ್‍ಸ್(ಜೆಸಿಬಿ, ಹಿಟಾಚಿ) ಚಾಲನ ತರಬೇತಿ, ವಿಷಯವನ್ನು ಹೊಸದಾಗಿ ಸೇರ್ಪಡೆಮಾಡಲಾಗಿದ್ದು ಇದಕ್ಕೆ ಅಭೂತಪೂರ್ವ ಪ್ರತಿಕ್ರೀಯೆ ದೊರೆಯುತ್ತಿದೆ. ತರಬೇತಿಗೆ ಅರ್ಜಿಸಲ್ಲಿಸಲು ಸೆ. 20 ಕೊನೆಯ ದಿನ ವಾಗಿದ್ದು 16 ವರ್ಷ ಮೇಲ್ಪಟ್ಟ ಸ್ತ್ರೀ, ಪುರುಷರು ತರಬೇತಿಗೆ ಅರ್ಹರಾಗಿದ್ದಾರೆ. ಆನ್‌ಲೈನ್‌ನಲ್ಲಿ ಅಥವಾ ಸರಸ್ವತಿ ವಿದ್ಯಾಲಯದ ಪ್ರಾಥಮಿಕ ಕಚೇರಿಯಲ್ಲಿಯೂ ಅರ್ಜಿ ಸಲ್ಲಿಸಬಹುದು ತರಬೇತಿ ಸಮಯದಲ್ಲಿಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದ್ದು. ಅಗತ್ಯ ಇರುವವರಿಗೆ ವಸತಿ ವ್ಯವಸ್ಥೆ ಕೂಡಾ ಮಾಡಲಾಗುತ್ತದೆ. ತರಬೇತಿ ಬಳಿಕ ವಿವೇಕಾನಂದ ಪಾಲ್‌ಟೇಕ್ನಿಕ್‌ನಿಂದ ಪ್ರಾಮಾಣ ಪತ್ರ ನೀಡಲಾಗುತ್ತದೆ.

 

 

 

ಸಾಮಾಜಿಕ ಅಂತರ ಕಾಪಾಡಿಕೊಂಡು ನಿರ್ದಿಷ್ಟ ಸಂಖ್ಯೆಯಲ್ಲಿ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಹೆಚ್ಚಿನ ಅರ್ಜಿಗಳು ಬಂದಲ್ಲಿ ಬೇಡಿಕೆಗೆ ಅನುಗುಣವಾಗಿ ಮುಂದಿನ ಹಂತದ ತರಬೇತಿ ನಡೆಸಲು ಚಿಂತಿಸಲಾಗುತ್ತಿದೆ. ದಿನಕ್ಕೆ 5 ಗಂಟೆಯಂತೆ ಒಟ್ಟು 30 ಗಂಟೆಗಳ ತರಬೇತಿ ನೀಡಲಾಗುತ್ತದೆ. ಆಯಾ ವಿಷಯಗಳ ತಜ್ಞರುಗಳು ಅನುಭವಿಗಳು ನೀಡುವ ತರಬೇತಿ ಅವಧಿಯಲ್ಲಿ ಸ್ವ ಉದ್ಯೋಗಕ್ಕೆ ಸರಕಾರದಿಂದ ದೊರಕುವ ಸಹಾಯಧನ ಸಾಲಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ ಕೃಷ್ಣ ಶೆಟ್ಟಿ, ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ಸಾಮಾರೋಪ ಸಮಾರಂಭದಲ್ಲಿ ಕೋಟ ಶ್ರೀನೀವಾಸ್ ಪೂಜಾರಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದ್ದಾರೆ.

Also Read  ಕಲುಷಿತ ನೀರು ಸೇವನೆ: ಓರ್ವ ಮೃತ್ಯು..! 12 ಮಂದಿ ಅಸ್ವಸ್ಥ..!     

ಪತ್ರಿಕಾಗೋಷ್ಟಿಯಲ್ಲಿ ಸಹಕಾರ ಭಾರತೀಯ ತಾಲೂಕು ಕಾರ್ಯದರ್ಶಿ ರಮೇಶ್ ಕಲ್ಪುರೆ, ತರಬೇತಿಯ ಸಂಯೋಜಕರಾದ ಮಾಧವ ಕೋಲ್ಪೆ ಉಪಸ್ಥಿತರಿದ್ದರು.

error: Content is protected !!
Scroll to Top