ಮಳೆಹಾನಿ ಪ್ರದೇಶಗಳಿಗೆ ಐವನ್ ಡಿಸೋಜ ಭೇಟಿ ➤ ಪುನರ್ ವ್ಯವಸ್ಥೆ ಕಲ್ಪಿಸಲು ಉಸ್ತುವಾ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12 : ನಗರದಲ್ಲಿ ವಿವಿಧ ಕಡೆಗಳಲ್ಲಿ ಕಳೆದ ಮೂರು ದಿನಗಳಲ್ಲಿ ಸುರಿದ ವಿಪರೀತ ಮಳೆಯಿಂದ ಅನೇಕ ಮನೆಗಳ ಆವರಣಗಳ ಕುಸಿತ, ತೋಟಗಾರಿಕಾ ಬೆಳೆ ನಷ್ಟ, ವಿವಿಧ ಹಂತದಲ್ಲಿ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ ಇಂದು ಮಾಜಿ ಶಾಸಕ ಐವನ್ ಡಿಸೋಜ ಭೇಟಿ ನೀಡಿ, ಪರಿಶೀಲಿಸಿದರು.

 

ಸಂಕಷ್ಟಕ್ಕೊಳಗಾದವರಿಗೆ ಪುನರ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮಳೆಯಿಂದಾದ ನಷ್ಟವನ್ನು ಅಂದಾಯಿಸಿ, ಶಾಸಕರು ಮತ್ತು ಉಸ್ತುವಾರಿ ಸಚಿವರು ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜು, ಲವೀನಾ ಪಿಂಟೊ, ಆಲಿಸ್ ಡಿಕುನ್ಹಾ, ಸತೀಶ್ ಪೆಂಗಳ್, ನಾಗೇಂದ್ರ ಕುಮಾರ್ ಮತ್ತು ವಸತಿ ಸಂಕೀರ್ಣದ ಪದಾಧಿಕಾರಿಗಳು ಹಾಗೂ ಅಲ್ಲಿನ ನಿವಾಸಿಗಳು ಜೊತೆಗಿದ್ದರು.

Also Read  ಕಡಬ-ಪಂಜ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯ ದುರವಸ್ಥೆ ► ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರಿಂದ ಎಚ್ಚರಿಕೆ

 

 

error: Content is protected !!
Scroll to Top