ಅಕ್ರಮ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ. 12. ತೊಕ್ಕೊಟ್ಟಿನಿಂದ ಕೇರಳಕ್ಕೆ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಪೊಲೀಸ್ ಉಪವಿಭಾಗದ ಎಸಿಪಿಯವರ ನಿರ್ದೇಶನದಂತೆ ಉಳ್ಳಾಲ ಠಾಣಾಧಿಕಾರಿ ನೇತೃತ್ವದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಕಾಸರಗೋಡಿನ ಬಂದ್ಯೋಡು ಮಂಗಳಪಾಡಿಯ 23 ವರ್ಷದ ರೆಜಿನ್ ಹಾಗೂ 21 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ.

ಕಾರಿನಲ್ಲಿ ಯಾವುದೇ ದಾಖಲೆಯಿಲ್ಲದೆ, ಇಬ್ಬರು ಅಕ್ರಮ ಮದ್ಯ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕೋಟೆಕಾರು ಅಜ್ಜನಕಟ್ಟೆ ಬಳಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ಬಳಿ ಕಾರು ನಿಲ್ಲಿಸಲು ಸೂಚಿಸಿದಾಗ ಚಾಲಕ ಕಾರು ನಿಲ್ಲಿಸದೆ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಸುತ್ತುವರಿದು ಕಾರನ್ನು ಅಡ್ಡಗಟ್ಟಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 225 ಲೀಟರ್ ಅಕ್ರಮ ಮದ್ಯ ಮತ್ತು ಬಳಿ ಬಣ್ಣದ ಮಾರುತಿ 800 ವಾಹನ ಸೇರಿದಂತೆ ಒಟ್ಟು 2 ಲಕ್ಷ ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Also Read  ವ್ಯಕ್ತಿಗೆ‌ ಮಾರು ಹೋಗಿ‌ ಹಣ ಚಿನ್ನ ಕಳೆದುಕೊಂಡ ಮಹಿಳೆ

 

error: Content is protected !!
Scroll to Top