ಡ್ರಗ್ಸ್ ಸಾಗಾಟದ ಶಂಕೆ ➤ ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ತೀವ್ರ ತಪಾಸಣೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 12. ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ಶುಕ್ರವಾರ ಸಂಜೆ ಡ್ರಗ್ಸ್ ಜಾಲ ಸಾಗಾಟದ ಶಂಕೆಯಿಂದ ಉಡುಪಿ ಜಿಲ್ಲಾ ಪೊಲೀಸರು ಬಿಗು ತಪಾಸಣೆ ನಡೆಸಿದರು.

 

 

ಉಡುಪಿ ಜಿಲ್ಲೆಯ ಪೊಲೀಸರು ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ಮಂಗಳೂರು ಮತ್ತು ಉಡುಪಿ ಕಡೆಯಿಂದ ಸಂಚರಿಸುವ ಸಾವಿರಾರು ವಾಹನ ಗಳನ್ನು ಸಮಗ್ರ ತಪಾಸಣೆ ನಡೆಸಿದರು. ಎಸ್‍ಪಿ ವಿಷ್ಣುವರ್ಧನ್ ವಾಹನ ತಪಾಸಣೆಯ ನೇತೃತ್ವ ವಹಿಸಿದರು. ಸಾರ್ವಜನಿಕರು ವಾಹನ ತಪಾಸಣೆಗೆ ಅನುವು ಮಾಡಿಕೊಡುವ ಮೂಲಕ ಪೊಲೀಸರೊಂದಿಗೆ ಸಹಕರಿಸಿದರು. ಡ್ರಗ್ಸ್ ಸಾಗಾಟದ ಶಂಕೆಯಿಂದ ಈ ತಪಾಸಣೆ ನಡೆದಿದೆ ಎನ್ನಲಾಗಿದೆ. ಎಡಿಶನಲ್‌ ಎಸ್‌ಪಿ ಕುಮಾರಚಂದ್ರ, ಕಾರ್ಕಳ ಡಿವೈಎಸ್‌ಪಿ ಭರತ್‌ ರೆಡ್ಡಿ, ಡಿಆರ್‌ ಡಿವೈಎಸ್‌ಪಿ ರಾಘವೇಂದ್ರ, ಕಾಪು ಸಿಪಿಐ ಮಹೇಶ್‌ ಪ್ರಸಾದ್‌, ಕಾರ್ಕಳ ಸಿಪಿಐ ಸಂಪತ್‌, ಪಡುಬಿದ್ರಿ ಪಿಎಸ್‌ಐ ದಿಲೀಪ್‌ ಗೌಡ, ಟ್ರಾಫಿಕ್‌ ಪಿಎಸ್‌ಐ ಅಬ್ದುಲ್‌ ಖಾದರ್‌ ಸಹಕರಿಸಿದ್ದರು.

Also Read  ➤ ಲಂಡನ್ ಕೇರಳ ಮೂಲದ ನರ್ಸ್ ಮತ್ತು ಇಬ್ಬರು ಮಕ್ಕಳ ನಿಗೂಢ ಸಾವು!

 

 

error: Content is protected !!
Scroll to Top