ಪ್ಲಾಸ್ಮಾ ದಾನಗೈದು ಜೀವ ರಕ್ಷಣೆ ಮಾಡಿದ ಜಿಲ್ಲೆಯ ಪ್ರಥಮ ಪೊಲೀಸ್ ➤ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 12. ಕೊರೋನಾ ಸೋಂಕಿಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವನಿಗೆ ಪೊಲೀಸ್‌ ಸಿಬಂದಿಯೊಬ್ಬರು ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಜಿಲ್ಲಾ ಎಸ್‌ಪಿ ಕಚೇರಿಯ ಡಿ.ಆರ್‌. ವಿಭಾಗದಲ್ಲಿ ಹೆಡ್‌ ಕಾನ್ ಸ್ಟೇಬಲ್ ಆಗಿರುವ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ನಿವಾಸಿ ರಂಜಿತ್‌ ಕುಮಾರ್‌ ರೈ ಪ್ಲಾಸ್ಮಾ ದಾನ ಮಾಡಿದವರು ಎನ್ನಲಾಗಿದೆ.

ಬ್ರಹ್ಮಾವರ ಮೂಲದ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕರಾದ ಪೂರ್ಣಾನಂದರವರು ಇಂತಹದೇ ಸಮಸ್ಯೆಯಿಂದ ಬಳಲುತ್ತಿದ್ದು, ಇದರ ಮಾಹಿತಿಯಂತೆ ರಂಜಿತ್‌ 0+ ಪ್ಲಾಸ್ಮಾ ದಾನ ಮಾಡಿದ್ದಾರೆ. ಅದಾದ ಬಳಿಕ ಪೂರ್ಣಾನಂದ ಅವರ ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಂಡಿದ್ದು, ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟಂತೆ ಪ್ಲಾಸ್ಮಾ ದಾನ ಮಾಡಿದವರಲ್ಲಿ ರಂಜಿತ್‌ ಜಿಲ್ಲೆಯಲ್ಲಿ ಪ್ರಥಮ ವ್ಯಕ್ತಿ ಆಗಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Also Read  ಮಂಗಳೂರು : ಅಡುಗೆ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿ..!!

error: Content is protected !!
Scroll to Top