ಮೈಸೂರು : ದಸರಾ ಗಜಪಡೆಗಳಿಗೂ ಕೊವೀಡ್ ಟೆಸ್ಟ್

(ನ್ಯೂಸ್ ಕಡಬ) newskadaba.com ಮೈಸೂರು, ಸೆ. 12. ಸಾಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವ ಕಳೆಗಟ್ಟಲು ಕೆಲ ದಿನಗಳಷ್ಟೇ ಬಾಕಿ ಇದೆ. ಕೊವೀಡ್ ಆತಂಕದ ನಡುವೆಯೂ ನಾಡಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೂ ಕೋವಿಡ್​ ಪರೀಕ್ಷೆ ಮಾಡಲಾಗುತ್ತದೆ.

 

ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರಲಿದ್ದಾನೆ. ಕಳೆದ ಬಾರಿಯ ಕ್ಯಾಪ್ಟನ್ ಅರ್ಜುನನಿಗೆ 60 ವರ್ಷ ದಾಟಿರುವ ಹಿನ್ನೆಲೆಯಲ್ಲಿ ದಸರಾದ ಯಾವುದೇ ಜವಾಬ್ದಾರಿಯನ್ನು ಅವನಿಗೆ ಕೊಡುತ್ತಿಲ್ಲ. ಅಲ್ಲದೆ ಈ ಬಾರಿ ಜಂಬೂ ಸವಾರಿಯಲ್ಲಿ 5 ಆನೆಗಳು ಮಾತ್ರ ಭಾಗವಹಿಸಲಿದ್ದು, ಮೊದಲ ದಿನದಿಂದ ಕೊನೇ ದಿನದವರೆಗೂ ಆನೆಗಳು ಅರಮನೆ ಆವರಣದಲ್ಲೇ ವಾಸ್ತವ್ಯ ಇರಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಅಲೆಕ್ಸಾಂಡರ್‌ ತಿಳಿಸಿದ್ದಾರೆ. ಇನ್ನು ಮಾನವರಿಂದ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆನೆಗಳು ಮತ್ತು ಮಾವುತ ಕಾವಾಡಿಗಳಿಗೆ ಕೋವಿಡ್ ಟೆಸ್ಟ್‌ ಮಾಡಲಾಗುತ್ತದೆ. ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.ಒಂದಿಷ್ಟು ಕೊವೀಡ್ ನಿಯಮಗಳಿಗನುಸಾರವಾಗಿ ಮೈಸೂರು ದಸರ ಅಂಬಾರಿ ಮೆರವಣಿಗೆ ನಡೆಯಲಿದೆ

Also Read  ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ, ಆಟಿಡೊಂಜಿ ದಿನ, ಅಭಿನಂದನಾ ಕಾರ್ಯಕ್ರಮ

error: Content is protected !!
Scroll to Top