ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರಳ ಶ್ರೀಕೃಷ್ಣಾಷ್ಟಮಿ

(ನ್ಯೂಸ್ ಕಡಬ) newskadaba.com ಶ್ರೀ ಸುಬ್ರಹ್ಮಣ್ಯ, ಸೆ. 12. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 11 ರಂದು ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯಿತು.

ಈ ಪ್ರಯುಕ್ತ ಕಾಶಿಕಟ್ಟೆಯಲ್ಲಿ ಅಷ್ಟಮಿ ದಿನ ಪೂಜಿಸಲ್ಪಡುವ ಕೃಷ್ಣನ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಳಕ್ಕೆ ತಂದು ಬಳಿಕ ಮತ್ತೆ ಕಾಶಿಕಟ್ಟೆಗೆ ಮೆರವಣಿಗೆಯಲ್ಲಿ ಸಾಗಿಸಲಾಯಿತು. ಈ ವೇಳೆ ರಸ್ತೆಯುದ್ದಕ್ಕೂ ಮೊಸರು ಕುಡಿಕೆಗಳನ್ನು ಒಡೆದು ಕೃಷ್ಣಾ ಜನ್ಮಾಷ್ಟಮಿ ಆಚರಿಸಲಾಯಿತು. ಪುರೋಹಿತ ಸನತ್ ನೂರಿತ್ತಾಯ, ದೇವಳದ ನಾಗೇಶ್ ಎ.ವಿ ದಿನಕರ ಮತ್ತಿತರರು ಉಪಸ್ಥಿತರಿದ್ದರು.

Also Read  ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ ➤ ಮುಂದುವರಿದ ಚಿಕಿತ್ಸೆ                              

 

 

 

error: Content is protected !!
Scroll to Top