ಮಂಗಳೂರು : ಜಲಾವೃತ ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಭೇಟಿ.

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಕಳೆದ ಎರಡು ದಿನಗಳಿಂದ, ನಗರದಲ್ಲಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದಲ್ಲಿರುವ ಜಪ್ಪುನಮೊಗರು ಕಲ್ಲಾಪು ಎಕ್ಕೂರು ಪ್ರದೇಶಗಳಲ್ಲಿ ವಸತಿ ಸಮುಚ್ಚಯಗಳು ಜಲಾವೃತಗೊಂಡಿದೆ. ಈ ಪ್ರದೇಶಗಳಿಗೆ ದ,ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

ನಗರದ ಹೊರವಲಯದಲ್ಲಿರುವ ಜಪ್ಪಿನಮೊಗರುವಿನಲ್ಲಿ ವಸತಿ ಸಮುಚ್ಚಯವೊಂದಕ್ಕೆ ನೀರು ನುಗ್ಗಿದೆ. ಪರಿಣಾಮ ಅಲ್ಲಿನ ಜನರು ನೀರಿನ ಮಧ್ಯೆಯೇ ಮನೆಯೊಳಗೆ ಕಾಲ ಕಳೆಯುವಂತಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿದ್ದು. ಅಪಾಯದ ಸೂಚನೆ ಕಂಡುಬಂದಲ್ಲಿ ಜನರನ್ನು ರಕ್ಷಿಸಲು ಸರ್ವ ಸನ್ನದ್ಧರಾಗಿದ್ದಾರೆ. ದೋಣಿಗಳ ಸಹಾಯದಿಂದ ವೃದ್ದರು ಮಕ್ಕಳು ಸೇರಿ 10ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.

Also Read  ಬೋನಿಗೆ ಬಿದ್ದ ಚಿರತೆ

 

error: Content is protected !!
Scroll to Top