ಎಸ್ಡಿಪಿಐ ಪಾಂಡವರಕಲ್ಲು ವತಿಯಿಂದ ‘ಕಾರ್ಯಕರ್ತರ ಮತ್ತು ಹಿತೈಷಿಗಳ ಸಮ್ಮಿಲನ’ ಕಾರ್ಯಕ್ರಮ ➤ ಹಲವಾರು ಹೊಸ ಕಾರ್ಯಕರ್ತರ ಸೇರ್ಪಡೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 12. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಾಂಡವರಕಲ್ಲು ವತಿಯಿಂದ ಪಕ್ಷದ ಕಾರ್ಯಕರ್ತರ ಸಮ್ಮಿಲನ ಮತ್ತು ಪಕ್ಷಕ್ಕೆ ಹೊಸ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕ ವಹಿಸಿದ್ದರು.

ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿಗಳಾದ ಆಲ್ಫೋನ್ಸ್ ಫ್ರಾಂಕೋ, ದ.ಕ ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು 30 ರಿಂದ 35 ರಷ್ಟು ಹೊಸ ಕಾರ್ಯಕರ್ತರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಸದಸ್ಯತ್ವವನ್ನು ಸ್ವೀಕರಿಸಿದರು.

ದೇಶಭಕ್ತಿ ಗೀತೆಯಾದ ‘ಸಾರೆ ಜಹಾಂಸೆ ಅಚ್ಛಾ’ ಹಾಡುವ ಮೂಲಕ ಕಾರ್ಯಕ್ರಮವು ಆರಂಭಗೊಂಡು, ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು. ವೇದಿಕೆಯಲ್ಲಿ ಎಸ್.ಡಿ.ಪಿ.ಐ ಬಂಟ್ಬಾಳ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಉಬೈದುಲ್ಲಾ, ಸಮಿತಿ ಸದಸ್ಯರಾದ ಪೈಝಲ್ ಮಂಚಿ ಮತ್ತು ಇತರ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಎಸ್ ಡಿ ಪಿ ಐ ಪಾಂಡವರಕಲ್ಲು ವಲಯಾಧ್ಯಕ್ಷರಾದ ಅಥಾವುಲ್ಲಾ ಕೆದಿಲೆ ಸ್ವಾಗತಿಸಿ, ಇಮ್ರಾನ್ ಪಾಂಡವರಕಲ್ಲು ನಿರೂಪಣೆ ಮಾಡಿ ವಂದಿಸಿದರು.

Also Read  ಗಂಡಿಬಾಗಿಲು ಮಸೀದಿಯಲ್ಲಿ ಜುಮಾ ನಮಾಜು ನಿರ್ವಹಿಸಿದ ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ

error: Content is protected !!
Scroll to Top