ಹಳೆಯ ಪೊಲೀಸ್ ವಸತಿಗೃಹದ ಸಾಮಾಗ್ರಿಗಳ ಬಹಿರಂಗ ಹರಾಜು ಪ್ರಕ್ರಿಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ಅಧೀನದಲ್ಲಿರುವ ನಗರದ ಪೊಲೀಸ್ ಲೇನ್ ಆವರಣದಲ್ಲಿರುವ 62 ಸಂಖ್ಯೆಯ ಶಿಥಿಲಾವಸ್ಥೆಯಲ್ಲಿರುವ ಹಳೆಯ ಪೊಲೀಸ್ ವಸತಿಗೃಹಗಳನ್ನು ನೆಲಸಮಗೊಳಿಸಲು ಮತ್ತು ಅದರಲ್ಲಿನ ಸಾಮಾಗ್ರಿಗಳನ್ನು ಹೇಗಿದೆಯೋ ಅದೇ ಸ್ಥಿತಿಯಲ್ಲಿ ಟೆಂಡರ್ ಕಂ ಬಹಿರಂಗ ಹರಾಜು ಮುಖಾಂತರ ವಿಲೇವಾರಿ ಮಾಡುವ ಸಲುವಾಗಿ ಟೆಂಡರ್ ಕಂ ಹರಾಜು ಪ್ರಕಟಣೆಯನ್ನು ಹೊರಡಿಸಲಾಗಿದೆ.


ಟೆಂಡರ್ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನ. ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2220528 ಅಥವಾ 2220810 ಸಂಪರ್ಕಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತ  ವಿಕಾಶ್ ಕುಮಾರ್ ವಿಕಾಶ್ ಐ.ಪಿ.ಎಸ್ ಅವರ ಪ್ರಕಟಣೆ ತಿಳಿಸಿದೆ.

Also Read  ದ.ಕ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳಬಹಿರಂಗ ಹರಾಜು

error: Content is protected !!
Scroll to Top