(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19. ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿರುವ ಡಿಸಿಪಿ ಹನುಮಂತರಾಯ ಹಾಗೂ ಸಿಬ್ಬಂದಿಗಳ ತಂಡ 2 ಮೊಬೈಲ್ ಗಳು, ಗಾಂಜಾ ಪ್ಯಾಕೇಟ್, ಪ್ಲಾಸ್ಟಿಕ್ ಬಾಟಲ್ ನಿಂದ ತಯಾರಿಸಿದ ಹುಕ್ಕಾ ರೀತಿಯ ವಸ್ತು, ಪಂಚ್, ರಾಡ್ ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ಸುಮಾರು 6.30 ರಿಂದ 7.30 ರ ನಡುವೆ ಡಿಸಿಪಿ ಹನುಮಂತರಾಯರ ನೇತೃತ್ವದಲ್ಲಿ ದ.ಕ. ಜಿಲ್ಲೆಯ 50 ಮಂದಿ ಅಧಿಕಾರಿಗಳು, 129 ಮಂದಿ ಸಿಬ್ಬಂದಿಯೊಂದಿಗೆ ಈ ದಾಳಿ ನಡೆಸಲಾಗಿತ್ತು. ಜೈಲಿಗೆ ಮಾರಕವಸ್ತುಗಳು ಪೂರೈಕೆಯಾಗಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಇದನ್ನು ರೂಟಿನ್ ಚೆಕ್ ಅಪ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿ ಲಭ್ಯವಾದ ಮಾರಕವಸ್ತುಗಳ ಬಗ್ಗೆ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.