ಮಗು ಹೆಣ್ಣೆಂದು ಏಳು ತಿಂಗಳ ಕಂದಮ್ಮನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ಪಾಪಿ ತಂದೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 11. ತಂದೆಯೇ ತನ್ನ ಏಳು ತಿಂಗಳ ಕಂದಮ್ಮನನ್ನು ನೀರು ತುಂಬಿಸಿಡಲಾಗಿದ್ದ ಬಕೆಟ್‌ ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಕಡೂರು ತಾಲೂಕಿನ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ.

ಆರೋಪಿಯನ್ನು ವಕೀಲ ಉಮಾಶಂಕರ್‌ ಎಂದು ಗುರುತಿಸಲಾಗಿದೆ. ಈತ ಮೂರು ವರ್ಷಗಳ ಹಿಂದೆ ಮಂಜುಳಾ ಎಂಬಾಕೆಯನ್ನು ಪ್ರೀತಿಸಿ ಎರಡನೇ ವಿವಾಹವಾಗಿದ್ದು, ಆಕೆಗೆ ಏಳು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಈ ಕಾರಣಕ್ಕೆ ಉಮಾಶಂಕರ್‌ ಪತ್ನಿಗೆ ಹಿಂಸೆ ನೀಡುತ್ತಿದ್ದ. ಎಂದಿನಂತೆ ಮಂಜುಳಾ ಕರ್ತವ್ಯಕ್ಕೆ ತೆರಳಿದ್ದ ಸಂದರ್ಭ ಉಮಾಶಂಕರ್‌‌ ತನ್ನ ಏಳು ತಿಂಗಳ ಪುಟ್ಟ ಮಗುವನ್ನು ನೀರು ತುಂಬಿದ್ದ ಬಕೆಟ್‌‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಮಂಜುಳ ಕಡೂರು ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನಂತೆ ಪೊಲೀಸರು ಆರೋಪಿ ಉಮಾಶಂಕರ್‌ ನನ್ನು ಬಂಧಿಸಿದ್ದಾರೆ.

Also Read  ದೇಶದಲ್ಲಿ ಬೆಲೆಯೇರಿಕೆಯನ್ನು ಸಮರ್ಥಿಸುತ್ತಿರುವ ಅಂಧ ಭಕ್ತರು ➤ ಅಂದ ಭಕ್ತರಿಗೆ ಬೇಕಾದರೆ ಬೇರೆಯೇ ಪೆಟ್ರೋಲ್ ಪಂಪ್ ನಿರ್ಮಿಸಲಿ ➤ ಕಡಬದ ಕಾಂಗ್ರೆಸ್ ಸಭೆಯಲ್ಲಿ ಯು.ಟಿ.ಖಾದರ್ ಲೇವಡಿ

error: Content is protected !!
Scroll to Top