ಬೆಳ್ತಂಗಡಿ : ದಲಿತ ಮಹಿಳೆಗೆ ಆಸಿಡ್ ಕುಡಿಸಿ ಹತ್ಯೆ..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.11. ಬೆಳ್ತಂಗಡಿಯ ಕಳಂಜ ಗ್ರಾಮದ ಬಳ್ಕಾಜೆ ಎಂಬಲ್ಲಿ ತೋಟದ ಕೆಲಸಕ್ಕೆಮದು ಬರುತ್ತಿದ್ದ ದಲಿತ ಮಹಿಳೆಗೆ ಬಲವಂತವಾಗಿ ಆಸಿಡ್ ಕುಡಿಸಿ ಕೊಲೆ ಮಾಡಿ ನಂತರ ಮಹಿಳೆಯ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಚಾರ್ಮಾಡಿ ಮೂಲದ ಪರಿಶಿಷ್ಟ ಪಂಗಡಕ್ಕೆ ಜಾತಿಗೆ ಸೇರಿದ ಮಹಿಳೆ ಕಳೆಂಜ ಗ್ರಾಮದ ಬಳ್ಕಾಜೆ ನಿವಾಸಿ ರೆಜಿಮೊನು ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದು.

 

ಕೆಲವೊಮ್ಮೆ ಮಹಿಳೆಯ ಅಪ್ರಾಪ್ತ ಮಗಳು ಸಹ ತಾಯಿ ಜೊತೆ ತೋಟಕ್ಕೆ ಹೋಗುತ್ತಿದ್ದಳು. ಅದರಂತೆ ಮೇ ತಿಂಗಳಲ್ಲಿ ರೆಜಿಮೊನುನವರು,ತೋಟಕ್ಕೆ ಹೋಗಿದ್ದ ಸಮಯದಲ್ಲಿ ರೆಜಿಮೊನು ಮತ್ತು ಆತನ ಸ್ನೇಹಿತ ಕೃಷ್ಣನ ಜೊಎ ಸೇರಿ ದಲಿತ ಮಹಿಳೆಗೆ ಬಲವಂತವಾಗಿ ಆಸಿಡ್ ಕುಡಿಸಿ ಕೊಲೆ ಮಾಡಿ ಬಳಿಕ ಅದನ್ನ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.  ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬಾಲಕಿಯ ಹೇಳಿಕೆಯ ಅಧಾರದಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಕಲಾಗಿದೆ.  ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

Also Read  ಪಂಜ: ಅಕ್ರಮ ಮರ ಸಾಗಾಟ ಭೇದಿಸಿದ ಅರಣ್ಯಾಧಿಕಾರಿಗಳು ► ಟಿಪ್ಪರ್, ಬೊಲೇರೋ ಅರಣ್ಯಾಧಿಕಾರಿಗಳ ವಶಕ್ಕೆ

 

error: Content is protected !!
Scroll to Top