ನಿವೃತ್ತ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ವಿ. ಮುಹಮ್ಮದ್ ವಿಧಿವಶ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ.11. ಬಂದರು ಟ್ರಾಫಿಕ್ ಪೊಲೀಸ್ ಠಾಣೆಯ ನಿವೃತ್ತ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹಾಜಿ ವಿ. ಮಹಮ್ಮದ್ ವಿಟ್ಲ (79) ಅವರು ಕಳೆದ ರಾತ್ರಿ 10.35ಕ್ಕೆ ಆಸ್ಪತ್ರೆಯಿಂದ ಮನೆಗೆ ಬರುವ ಹಾದಿಯಲ್ಲಿ ಆಂಬುಲೆನ್ಸ್ ನಲ್ಲಿ ನಿಧನರಾದರು. ಶುಕ್ರವಾರ ಜುಮಾ ಮೊದಲು ಬಜ್ಪೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ವಿಟ್ಲ ಸಮೀಪದ ಮಾರ್ನೆಮಿಗುಡ್ಡೆ ನಿವಾಸಿಯಾಗಿದ್ದ ವಿ. ಮಹಮ್ಮದ್ ಹಾಜಿ ಕಳೆದ 27 ವರ್ಷಗಳಿಂದ ಬಜ್ಪೆಯಲ್ಲಿ ನೆಲೆಸಿದ್ದರು. ವಿಟ್ಲದ ಜನತೆಗೆ ‘ಪೊಲೀಸ್ ಮೋನಿಚ್ಚ’ ಎಂದೇ ಚಿರಪರಿಚಿತರಾಗಿದ್ದ ಅವರು ಸ್ನೇಹಜೀವಿಯಾಗಿದ್ದರು. ಸಂಘಟನಾತ್ಮಕವಾಗಿ ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಪೊಲೀಸ್ ಲೈನ್ ಬಳಿಯಿರುವ ಸೈದಾನ್ ಬೀವಿ ದರ್ಗಾದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Also Read  ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ►ಜಲಕೃಷಿಯಲ್ಲಿ ಉದ್ಯಮ ಶೀಲತೆಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿಯ ಅಧ್ಯಯನ

 

 

error: Content is protected !!
Scroll to Top