ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎಚ್.ವಿ. ಶಿವಾನಂದ ಶೇಟ್ ವಿಧಿವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ  ಶ್ರೀ ವಾಸುದೇವ ಎಸ್ ಶೇಟ್ ಹೊನ್ನಾವರ ಹಾಗೂ ಶ್ರೀಮತಿ ಕಾಮಾಕ್ಷಿ ವಾಸುದೇವ ಶೇಟ್ ದಂಪತಿಗಳ ಪುತ್ರ ಎಚ್.ವಿ. ಶಿವಾನಂದ ಶೇಟ್ (60) ಇವರು ಅಲ್ಪಕಾಲದ ಅಸೌಖ್ಯದಿಂದ ಶಿವಮೊಗ್ಗದಲ್ಲಿ ದೈವಾದೀನರಾಗಿದ್ದಾರೆ.  ಶ್ರೀಯುತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.


1960 ರಲ್ಲಿ ಹೊನ್ನಾವರದಲ್ಲಿ ಜನಿಸಿದ ಇವರು, ತದನಂತರ ತಮ್ಮ ವಿದ್ಯಾಭ್ಯಾಸ ಪಿ.ಯು.ಸಿ ಮುಗಿಸಿದ ನಂತರ ಸತತ 30 ವರ್ಷಗಳಿಂದ  ಸ್ವ್ರರ್ಣಾಭರಣದ ಕೆಲ್ಸದಲ್ಲಿ ತೊಡಗಿಸಿಕೊಂಡಿದ್ದರು. ಸಾಹಿತ್ಯ ಶಕ್ತಿ ಓದುವುದು, ಚುಟುಕು ರಚನೆ, ಕಾವ್ಯರಚನೆ, ಹಾಡುಗಾರಿಕೆ, ನಿರೂಪಣೆ, ನಾಟಕಗಳಿಗೆ ಧ್ವನಿ ಕೊಡುವುದು, ಕಥೆಯನ್ನು ಕಾರ್ಯರೂಪಕ್ಕೆ ತರುವುದು, ನೃತ್ಯಗಳಿಗೆ ಮಾನ್ಯತೆ ಕೊಡುವುದು ಇವರ ಹವ್ಯಾಸಗಳು.

ಶ್ರೀಯುತರ  ಸಾಧನೆಗಳು:
1. ಮಲೆನಾಡು ಸಿಂಹ ವಾರಪತ್ರಿಕೆ, ಶಿವಮೊಗ್ಗದ ವರದಿಗಾರನಾಗಿ ಎರಡು ವರ್ಷ ಕೆಲಸ ಮಾಡಿರುತ್ತಾರೆ. 1992 ರಿಂದ1994 ರವರೆಗೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕರ್ನಾಟಕ ಸಂಘ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಡೆಸುತ್ತಿರುವ ಬಹುಭಾಷಾ ಕಾರ್ಯಕ್ರಮಕ್ಕೆ ಕೊಂಕಣಿ ಕವಿಯಾಗಿ ಭಾಗವಹಿಸಿ ಕಾವ್ಯ ವಚನ ಮತ್ತು ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರಂತರವಾಗಿ ಕೊಡುತ್ತಾ ಬಂದಿರುತ್ತಾರೆ.

Also Read  ಪ್ರವಾಸಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ➤ ತಪ್ಪಿದ ಭಾರಿ ಅನಾಹುತ

2. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹತ್ತು ವರ್ಷದಿಂದ ಸದಸ್ಯರಾಗಿರುತ್ತಾರೆ.
3. ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿಯಾಗಿ ಪ್ರತಿವರ್ಷ ಭಾಗವಹಿಸಿರುತ್ತಾರೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಟ್ಟಿರುತ್ತಾರೆ.
4. ಕಾವ್ಯ ಕಲರವ, ನೈದಿಲೆ, ಒಕ್ಕೊರಲು ಎಂಬ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಯಾದ ಪುಸ್ತಕಗಳಿಗೆ ಪರಿಷತ್ತಿನಿಂದ ಮಾನ್ಯತೆ ಪಡೆದ ಕಾವ್ಯಗಳು ಲೋಕಾರ್ಪಣೆಯಾಗಿರುತ್ತದೆ.
5. ನೂರಾರು ಭಕ್ತಿಗೀತೆಗಳು, ಆರು ದೇಶ ಭಕ್ತಿಗೀತೆ, ಜಾನಪದ ಶೈಲಿಯ ಹಲವಾರು ಗೀತೆಗಳು ಕೊಂಕಣಿ ಗೀತೆಗಳು ರಚನೆಯಾಗಿ ಧ್ವನಿಸುರುಳಿಯಾಗಿ ಬಿಡುಗಡೆ ಹೊಂದಿರುತ್ತದೆ.
6. 16-01-2000 ಇಸವಿಯಲ್ಲಿ ಶಿವಮೊಗ್ಗದಲ್ಲಿ ಅಕಾಡೆಮಿ ಸದಸ್ಯರಾದ ಮಾಧವ ಪೈ ರವರ ನೇತೃತ್ವದಲ್ಲಿ  ನಡೆದ ಕೊಂಕಣಿ ಸಾಂಜ್ ಕಾರ್ಯಕ್ರಮದಲ್ಲಿ ಕೊಂಕಣಿ ಗೀತ್ ಭಂಡಾರ್ ದ್ವನಿ ಮುದ್ರಣ ಬಿಡುಗಡೆಯಾಗಿದೆ.

Also Read  ಮದುವೆಯ ಫೋಟೋಗಳನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ► ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಪ್ರಮುಖ ಆರೋಪಿ ಸೇರಿದಂತೆ ಮೂವರ ಬಂಧನ

error: Content is protected !!
Scroll to Top