ಕಡಬದ ಉದ್ಯಮಿ ವೆಂಕಟೇಶ್ ಪಾಡ್ಲ ರವರಿಗೆ ಜೇಸಿಐ ‘ಸಾಧನಾ ಶ್ರೀ’ ಪುರಸ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ, ಯುವ ಉದ್ಯಮಿ, ಬಾಲಾಜಿ ಪವರ್ ಸಿಸ್ಟಮ್ ಮಾಲಕ ವೆಂಕಟೇಶ್ ಪಾಡ್ಲ ಅವರಿಗೆ ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಕೊಡಮಾಡುವ ‘ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೃತ್ತಿ ಅಥವಾ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸಿ ಘಟಕದ ಓರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಜೇಸಿಐ ಕಡಬ ಕದಂಬ ಘಟಕದಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಇಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆದ ದ್ವಿತೀಯ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

Also Read  ಕಾಸರಗೋಡು: ಅಪಾರ್ಟ್‌ಮೆಂಟ್‌ನಲ್ಲಿ ಬಚ್ಚಿಟ್ಟ ಗಾಂಜಾ ವಶಕ್ಕೆ

error: Content is protected !!
Scroll to Top