ಮಾಜಿ‌ ಸಿಎಂ ಬೆಂಗಾವಲು ವಾಹನ ಅಪಘಾತ



(ನ್ಯೂಸ್ ಕಡಬ) newskadaba.com ಹೈದರಾಬಾದ್, ಸೆ. 06. ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಹತ್ತಿರ ದಂಡುಮಲ್ಕಪುರಂ ಎಂಬಲ್ಲಿ ಆಂಧ್ರ ಪ್ರದೇಶದ ಅಮರಾವತಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.





ರಸ್ತೆಯಲ್ಲಿ ಕಾರು ಹೋಗುತ್ತಿದ್ದ ವೇಳೆ ಹಸುವೊಂದು ಅಡ್ಡ ಬಂದ ಕಾರಣ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಚಂದ್ರಬಾಬು ನಾಯ್ಡು ಅವರು ಮತ್ತೊಂದು ಬುಲ್ಲೆಟ್ ಪ್ರೂಫ್ ಬೆಂಗಾವಲು ಕಾರಿನಲ್ಲಿ ಇದ್ದ ಕಾರಣ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದರ. ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.






error: Content is protected !!
Scroll to Top