ಪುತ್ತೂರು: ಎಡನೀರು ಶ್ರೀಮದ್ ಶಂಕರಾಚಾರ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಲಿಂಗೈಕ್ಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 06. ಶ್ರೀಮದ್ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಎಡನೀರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳವರು (76) ಆದಿತ್ಯವಾರ ರಾತ್ರಿ ಅವರ ಇಷ್ಟದೇವರಾದ ಶ್ರೀ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರ ಪಾದಪದ್ಮಗಳಲ್ಲಿ ಐಕ್ಯರಾಗಿದ್ದು, ಶಾಶ್ವತವಾದ ಮೋಕ್ಷ ಸಾಮ್ರಾಜ್ಯವನ್ನು ಪಡೆದಿರುತ್ತಾರೆ.

ಶ್ರೀಗಳು ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಚಾತುರ್ಮಾಸ್ಯ ವೃತ ಪೂರ್ಣಗೊಳಿಸಿದ್ದರು. ಶ್ರೀಗಳು ಅತ್ಯಂತ ಕಿರಿಯ ವಯಸ್ಸಿಗೇ ಸನ್ಯಾಸ ದೀಕ್ಷೆ ಸ್ವೀಕರಿಸಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳ ಬಳಿಕ ಅತೀ ಹೆಚ್ಚು ಚಾತುರ್ಮಾಸ್ಯ ವೃತಾಚರಣೆ ನಡೆಸಿದವರು.

Also Read  ಕರಾವಳಿಯಲ್ಲಿ ವರುಣನ ಆರ್ಭಟ ➤ ಜೂ.23 ಮತ್ತು 24 ರಂದು ಆರೆಂಜ್ ಅಲರ್ಟ್

ಯಕ್ಷಗಾನ, ಸಂಗೀತ ಕಲೆಗಳಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ಇವರು ಭಾಗವತರಾಗಿ, ಕಲಾ ಆರಾಧಕರಾಗಿದ್ದರು. ಇದೀಗ ಶ್ರೀಗಳು ತಮ್ಮ ಅಪಾರ ಶಿಷ್ಯರನ್ನು ಅಗಲಿ ಕೇಶವನಲ್ಲಿಗೆ ಪ್ರಯಾಣ ಬೆಳೆಸಿ ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ.

error: Content is protected !!
Scroll to Top