ಅಕ್ರಮ ದನ ಸಾಗಾಟ ಪ್ರಕರಣ ➤ ಗೋವುಗಳನ್ನು ಹಿಂತಿರುಗಿಸುವಂತೆ ನ್ಯಾಯಾಲಯದಿಂದ ಆದೇಶ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 02. ಅಕ್ರಮ ಗೋ ಸಾಗಾಟದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಹಸು ಮತ್ತು ಕರುವನ್ನು ವಾಪಾಸು ನೀಡುವಂತೆ ನ್ಯಾಯಾಲಯ ಆದೇಶಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಎರಡು ವಾರಗಳ ಹಿಂದೆ ಓಮ್ನಿ ಕಾರೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಇರ್ದೆ ಸಮೀಪದ ಚೆಲ್ಯಡ್ಕ ಎಂಬಲ್ಲಿ ವಶಪಡಿಸಿಕೊಂಡು, ಆರೋಪಿಗಳಾದ ಬಾಲಕೃಷ್ಣ ಗೌಡ ಮತ್ತು ಆರ್ಲಪದವಿನ ಮೂಸಾ ಎಂಬವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಇದೀಗ ಆರೋಪಿ ಮೂಸಾ ತನಗೆ ಹಸು ಮತ್ತು ಕರುವನ್ನು ಹಿಂತಿರುಗಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯತೀಕರಿಸಿದ ನ್ಯಾಯಾಲಯವು ದನಗಳನ್ನು ಹಿಂತಿರುಗಿಸಲು ಆದೇಶಿಸಿದೆ.

Scroll to Top