ಕ್ರೈಸ್ತ ಯುವಕನ ಮನೆಯಲ್ಲಿ ಹಿಂದೂ ಯುವತಿಯರಿದ್ದ ಹಿನ್ನೆಲೆ ➤ ಹಿಂದೂ ಸಂಘಟನೆ ಹಾಗೂ ಪೊಲೀಸರ ದಾಳಿ

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 01. ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೋರ್ವ ಹಿಂದೂ ಸಮುದಾಯದ ಇಬ್ಬರು ಯುವತಿಯರನ್ನು ತನ್ನ ಮನೆಗೆ ಕರೆದು ಮತಾಂತರಿಸುತ್ತಿದ್ದಾರೆ ಎಂದು ಆರೋಪಿಸಿ, ಭಜರಂಗದಳದ ಕಾರ್ಯಕರ್ತರು ನೀಡಿದ ಮಾಹಿತಿಯನುಸಾರ ಪೊಲೀಸರು ದಾಳಿ ನಡೆಸಿದ ಘಟನೆ ಕನ್ಯಾನ ಸಮೀಪದ ಕೇಪುಳಗುಡ್ಡೆ ಎಂಬಲ್ಲಿ ನಡೆದಿದೆ.

ಈತನಿಗೆ ಕನ್ಯಾನ ಸಮೀಪದಲ್ಲಿ ಫ್ಯಾನ್ಸಿ ಅಂಗಡಿಯಿದ್ದು, ಅಲ್ಲಿಗೆ ಬರುತ್ತಿದ್ದ ಯುವತಿಯರಿಗೆ ವಿವಿಧ ಆಮಿಷಗಳನ್ನು ನೀಡಿ, ಬಲವಂತವಾಗಿ ಪುಸಲಾಯಿಸಲು ಯತ್ನಿಸುತ್ತಿದ್ದ ಎಂಬ ಆರೋಪ ಕೇಳಿ ಬರುತ್ತಿದೆ. ಇದೀಗ ಕರೋಪಾಡಿಯ ಒಂದೇ ಮನೆಯ ಸಹೋದರಿಯರಿಬ್ಬರನ್ನು ಮನೆಗೆ ಕರೆ ತಂದಿದ್ದು, ಇದರ ಖಚಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಈ ಯುವಕನ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವಿಶ್ವ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.

Also Read  ಲಾಕ್‌ಡೌನ್ ಇದ್ದರೂ ರವಿವಾರ ಮದುವೆ ಸಮಾರಂಭಗಳಿಗೆ ಅನುಮತಿ

error: Content is protected !!
Scroll to Top