ಸುಳ್ಯ: ಕೆವಿಜಿ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ತರಗತಿ ಆರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 01. ಕೆವಿಜಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ತರಗತಿಗಳ ಪ್ರಾರಂಭದ ಜೊತೆಗೆ ಮಾಹಿ ಮತ್ತು ತರಬೇತಿ ಕಾರ್ಯಕ್ರಮವೂ ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ನೂತನ 34 ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಲಾಯಿತು. ಕೊನೆಯಲ್ಲಿ ಡಾ. ಮಹಾಬಲೇಶ್ವರ ಗೌಡ ವಂದನಾರ್ಪಣೆಗೈದು, ಕಾರ್ಯಕ್ರಮವನ್ನು ಡಾ. ಅನುಷಾ ಕೆ. ಹಾಗೂ ಲಕ್ಷ್ಮೀ ಪಾಂಡೆ ನಿರೂಪಿಸಿದರು.

Also Read  ಮುಂದಿನ 2 ದಿನ ರಾಜ್ಯದಲ್ಲಿ ಮಳೆ ಅಬ್ಬರ !

error: Content is protected !!