ಬಂಟ್ವಾಳ: ಅಂತರ್ ಜಿಲ್ಲಾ ಆರೋಪಿಯ ಬಂಧನ



(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 01. ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಫರಂಗಿಪೇಟೆಯ ಸೂಪರ್ ಮಾರ್ಕೆಟ್ ನಲ್ಲಿ ಆಗಸ್ಟ್ 25 ರ ರಾತ್ರಿಗೆ ಸುಮಾರು 25 ಸಾವಿರ ಮೌಲ್ಯದ ದಿನಸಿ ಸಾಮಾಗ್ರಿ ಹಾಗೂ ನಗದು ಕಳವು‌ ಮಾಡಿರುವ ಆರೋಪಿಯನ್ನು ಕೆಲವೇ ದಿನಗಳಲ್ಲಿ‌ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.






ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಬೆಂಗ್ರೆ ಕಸಬ ನಿವಾಸಿಯಾದ ಮಹಮ್ಮದ್ ಅನ್ಸಾರ್ ಎಂದು ಗುರುತಿಸಲಾಗಿದೆ. ಈತನು ಈ ಹಿಂದೆ ಮಂಗಳೂರು ನಗರ ವ್ಯಾಪ್ತಿಯ ಪಾಂಡೇಶ್ವರ, ಬಂದರು,ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ದರೋಡೆ ಪ್ರಕರಣದ ಆರೋಪಿಯಾಗಿದ್ದು, ಈತನು ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುತ್ತಾನೆ.






ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ ಸಂಜೀವ ಕೆ. ರವರ ನೇತೃತ್ವದಲ್ಲಿ ಎ.ಎಸ್.ಐ ಬಾಲಕೃಷ್ಣ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!
Scroll to Top