ಬಸ್ಸಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ➤ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಲಕ್ನೋ, 30 ಚಲಿಸುತ್ತಿದ್ದ ಬಸ್‌ನಲ್ಲಿ‌‌ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆರೋಪಿಯನ್ನು ಬರ್ಹೈಚಿ ಜಿಲ್ಲೆಯ ನಿವಾಸಿ ರವಿ ಎನ್ನಲಾಗಿದೆ. ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದ ಬಸ್‌ನಲ್ಲಿ ಚಾಲಕನ ಕ್ಯಾಬಿನ್‌‌ನ ಹಿಂಭಾಗದಲ್ಲೇ ಕುಳಿತಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಕೂಡಲೇ ಮಹಿಳೆಯು ಬಸ್ಸಿನಲ್ಲಿದ್ದ ಎಚ್ಚರಿಕೆ ಗಂಟೆ ಬಾರಿಸಿ, ನಂತರ 112 ಸಹಾಯವಾಣಿಗೂ ಕರೆ ಮಾಡಿದ್ದಾಳೆ. ಈ ವೇಳೆ ಆಕೆ ಬಸ್‌ ಕ್ಲೀನರ್‌‌ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ  ಪೊಲೀಸರಿಗೆ   ದೂರು ನೀಡಿದ್ದಾಳೆ. ಬಳಿಕ ಮಹಿಳೆ ಹಾಗೂ ಆರೋಪಿ ರವಿ ಎಂಬಾತನನ್ನು ಪೊಲೀಸರು ಬಸ್‌ನಿಂದ ಕೆಳಕ್ಕಿಳಿಸಿ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ನಂತರ ಮಹಿಳೆಯನ್ನು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ನಿವಾಸಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಸ್‌ ಕ್ಲೀನರ್‌ ಹಾಗೂ ಕಂಡೆಕ್ಟರ್‌ ವಿರುದ್ದ ಮಂತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು               

error: Content is protected !!
Scroll to Top