ಕಡಬ: ಫೈನಾನ್ಸ್ ಗೆ ಹಣ ಕಟ್ಟಲು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ. 28. ಸ್ವಸಹಾಯ ಸಂಘದ ಹಣ ಕಟ್ಟಿ ಬರುತ್ತೇನೆ ಎಂದು ಹೋದ ಯುವಕನೋರ್ವ ವಾಪಾಸು ಮನೆಗೆ ಬಾರದೆ ನಾಪತ್ತೆಯಾದ ಘಟನೆ ಠಾಣಾ ವ್ಯಾಪ್ತಿಯ ಚಾರ್ವಾಕದಲ್ಲಿ ನಡೆದಿದೆ.

ಕಾಣೆಯಾದ ವ್ಯಕ್ತಿಯನ್ನು ಚಾರ್ವಾಕ ನಿವಾಸಿ ಕೃಷ್ಣಪ್ಪ ಗೌಡ ಎಂಬವರ ಪುತ್ರ ಲೋಕೇಶ್ (25) ಎಂದು ಗುರುತಿಸಲಾಗಿದೆ. ಕುಡಿತದ ಚಟ ಹೊಂದಿದ್ದ ಈತ ಬುಧವಾರದಂದು ಪುತ್ತೂರಿನ ಬಜಾಜ್ ಫೈನಾನ್ಸ್ ನಲ್ಲಿ ಹಣ ಕಟ್ಟಲು ಹೋಗಿ ಸಂಜೆಯವರೆಗೂ ಮನೆಗೆ ಹಿಂತಿರುಗದೆ ಇದ್ದುದರಿಂದ ಮನೆಯವರು ಫೋನ್ ಮಾಡಿದಾಗ, ನಾನು ಬೈಕ್ ಅನ್ನು ಪುತೂರು ದೇವಸ್ಥಾನದ ಬಳಿ ನಿಲ್ಲಿಸಿ, ಬಸ್ಸಿನಲ್ಲಿ ದೂರ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ ಎನ್ನಲಾಗಿದೆ. ಇದೀಗ ಫೋನ್ ಸ್ವಿಚ್ ಆಫ್ ಆಗಿದ್ದು, ಫೈನಾನ್ಸ್ ಗೆ ಹಣ ಕಟ್ಟದೇ ನಾಪತ್ತೆಯಾಗಿರುತ್ತಾನೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 5.8 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿದ್ದ ಈತ ಕನ್ನಡ, ತುಳು ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಡಬ ಪೊಲೀಸ್ ಠಾಣೆ 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Also Read  ಟಿಪ್ಪರ್ ಢಿಕ್ಕಿ ➤ ಗಂಭೀರ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು..!

error: Content is protected !!
Scroll to Top