ಸವಣೂರು : ನೂತನ ಕಡಬ ತಾ.ಪಂಚಾಯತ್ ನ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರಿಗೆ ಸ್ವಾಗತ

(ನ್ಯೂಸ್ ಕಡಬ) newskadaba.com ಸವಣೂರು , ಆ. 28.  ನೂತನ ಕಡಬ ತಾಲೂಕು ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸವಣೂರು ಕ್ಷೇತ್ರದ ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಅವರಿಗೆ ಸವಣೂರು ಜಂಕ್ಷನ್‌ನಲ್ಲಿ ಹೂವಿನ  ಹಾರ ಹಾಕಿ ಸ್ವಾಗತಿಸಲಾಯಿತು.

ಈ ಸಂದರ್ಭ ಪುತ್ತೂರು  ತಾ.ಪಂ.ಅಧ್ಯಕ್ಷ  ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಭವಾನಿ, ಚಿದಾನಂದ, ಮೀನಾಕ್ಷಿ ಮಂಜುನಾಥ್, ಹರೀಶ್ ಬಿಜತ್ರೆ,  ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ  ಸಕ್ರಮ  ಸಮಿತಿ  ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು  ಗ್ರಾಮ ಪಂಚಾಯತ್ ಮಾಜಿ  ಅಧ್ಯಕ್ಷೆ ಇಂದಿರಾ ಬಿ.ಕೆ, ಮಾಜಿ ಉಪಾಧ್ಯಕ್ಷ ರವಿ ಕುಮಾರ್ ಬಿ.ಕೆ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Also Read  ಮಳೆಗೆ ಧ್ವಂಸಗೊಂಡ ಮನೆ - ಅದೃಷ್ಟವಶಾತ್ ಯಜಮಾನಿ ಅಪಾಯದಿಂದ ಪಾರು

error: Content is protected !!
Scroll to Top