ಬನ್ನೇರುಘಟ್ಟ ಪಾರ್ಕ್ ಆನೆ ಮರಿಗೆ “ಸುಧಾಮೂರ್ತಿ” ಹೆಸರು ನಾಮಕರಣದ ಮೂಲಕ ಗೌರವ

(ನ್ಯೂಸ್ ಕಡಬ) newskadaba.com ಆನೇಕಲ್. ಆ,28:  ಇತ್ತೀಚೆಗೆ ತಾನೇ ಕೇವಲ ತಿಂಗಳ ಅಂತರದಲ್ಲಿ ಉದ್ಯಾನವನದ ಎರಡು ಸಾಕಾನೆಗಳು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದವು. ವನ್ಯಜೀವಿ ಸಂರಕ್ಷಣೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೀಡಿರುವ ಕೊಡುಗೆ ಹಿನ್ನಲೆಯಲ್ಲಿ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಆನೆ ಮರಿಯೊಂದಕ್ಕೆ ಸುಧಾ ಮೂರ್ತಿ ಹೆಸರಿಡಲಾಗಿದೆ.

 

 

ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 45 ವರ್ಷದ ಸುವರ್ಣ ಎಂಬ ಆನೆ, ಹೆಣ್ಣು ಮರಿಗೆ ಜನ್ಮ ನೀಡಿದ್ದು, ಈ ಆನೆ ಮರಿಗೆ ಸುಧಾ ಮೂರ್ತಿ ಅವರ ಹೆಸರಿಡಲಾಗಿದೆ. ಈ ಆನೆ ಮರಿಯ ಜತೆಗೆ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಮರಿ ಆನೆಗೆ ಹೆಸರು ಸೂಚಿಸುವಂತೆ ಆನ್ ಲೈನ್ ನಲ್ಲಿ ಮನವಿ ಮಾಡಿದ್ದರು. ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿರವರ ಹೆಸರಿಡುವ ಮೂಲಕ ವಿಶಿಷ್ಠ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ‌.

Also Read  ವಿದ್ಯುತ್ ದರ ಏರಿಕೆಗೆ ಎಸ್ಕಾಂ ಚಿಂತನೆ..!!

 

error: Content is protected !!
Scroll to Top