ಕಡಬ: ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ



(ನ್ಯೂಸ್ ಕಡಬ) newskadaba.com ಕಡಬ, ಆ.25. ಐಸ್ ಕ್ರೀಮ್ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯ ನಿವಾಸಿ ತೀರ್ಥಲತಾ(20) ಎಂಬಾಕೆ ಮಂಗಳೂರಿನ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆಂದು ಆಗಸ್ಟ್ 22 ರಂದು ತೆರಳಿದ್ದು, ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ‌ ಎನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಕಡಬ ಠಾಣೆಗೆ ದೂರು ನೀಡಿದ್ದಾರೆ.






error: Content is protected !!
Scroll to Top